ಶ್ರೀನಗರ: ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಹಾಗೂ ಬಾರಾಮುಲ್ಲಾ ಜಿಲ್ಲೆಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಬ್ಬ ಉಗ್ರ ಹಾಗೂ ಉಗ್ರರ ಸಹಚರನನ್ನು ಬಂಧಿಸಿವೆ.
ಶ್ರೀನಗರ: ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಹಾಗೂ ಬಾರಾಮುಲ್ಲಾ ಜಿಲ್ಲೆಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಬ್ಬ ಉಗ್ರ ಹಾಗೂ ಉಗ್ರರ ಸಹಚರನನ್ನು ಬಂಧಿಸಿವೆ.
ಗುಪ್ತಚರ ಮಾಹಿತಿಯನ್ನು ಆಧರಿಸಿ ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್ ಪಡೆಗಳು ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ವಲಯದ ಟ್ರಾಲ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಎ-ತಯಬಾ (ಎಲ್‌ಟಿಇ) ಭಯೋತ್ಪಾದಕ ಸಂಘಟನೆಯ ಸದಸ್ಯ ಇರ್ಶಾದ್ ಅಹಮದ್ ಚೋಪನ್‌ನನ್ನು ಬಂಧಿಸಲಾಗಿದೆ.
ದಕ್ಷಿಣ ಕಾಶ್ಮೀರದಲ್ಲಿ ವಲಸೆ ಕಾರ್ಮಿಕನೊಬ್ಬನ ಮೇಲೆ ಅಕ್ಟೋಬರ್ 24ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಚೋಪನ್ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಉಗ್ರರ ಸಹಚರನ ಬಂಧನ: ಬಾರಾಮುಲ್ಲಾ ಜಿಲ್ಲೆಯ ಜಾನ್‌ಬಾಜ್‌ಪೋರಾ- ಬಿನ್ನೇರ್ ರಸ್ತೆಯಲ್ಲಿ ಶೌಕತ್ ಅಹಮದ್ ಭಟ್ ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ. ಈತ ಮೂಲತಃ ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯವನಾಗಿದ್ದು, ಉಗ್ರರ ಸಹಚರನಾಗಿದ್ದ. ಈತನಿಂದ ಒಂದು ಎ.ಕೆ.47 ಬಂದೂಕು, ಒಂದು ಮ್ಯಾಗಜಿನ್ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಈತ ಕಳೆದ ವಾರ ತನ್ನ ಸ್ವಗ್ರಾಮದಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು ಎಂದು ತಿಳಿಸಿದ್ದಾರೆ.