ಮಂಜೇಶ್ವರ: ಎಪ್ಪತ್ತು ವರ್ಷ ಹರೆಯ ಮೇಲ್ಪಟ್ಟ ಹಿರಿಯ ನಾಗರಿಕರ ಕೇಂದ್ರ ಸರ್ಕಾರ ನೀಡುವ ಆಯುಷ್ಮಾನ್ ಯೋಜನೆಯ ನೋಂದಣಿ ಕಾರ್ಯಕ್ರಮ ಬಿಜೆಪಿ ಮಂಜೇಶ್ವರ ಪಂಚಾಯತಿ ವತಿಯಿಂದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಹಾಗೂ ವರ್ಕಾಡಿ ಪಂಚಾಯತಿ ವತಿಯಿಂದ ಮೊರತ್ತಣೆ ಜನಸೇವಾ ಕೇಂದ್ರದಲ್ಲಿ ಬುಧವಾರ ನಡೆಯಿತು.
ಬಿಜೆಪಿ ಮಂಡಲಾಧ್ಯಕ್ಷ ಆದರ್ಶ ಬಿ.ಎಂ., ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ನೇತಾರರಾದ ಯತೀರಾಜ್ ಶೆಟ್ಟಿ, ಯಾದವ ಬಡಾಜೆ, ರವಿರಾಜ್, ಲಕ್ಷ್ಮಣ ಕುಚ್ಚಿಕಾಡ್, ತುಳಸಿಕುಮಾರಿ ನೇತೃತ್ವ ನೀಡಿದರು.