ತಿರುವನಂತಪುರಂ: ಡಿಜಿಟಲ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸಿಸಾ ಥಾಮಸ್ ನೇಮಕದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ನೇಮಕಾತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಏಕ ಪೀಠ, ನಂತರ ವಿಚಾರಣೆಯನ್ನು ಮುಂದೂಡಿತು. ಮೊನ್ನೆ, ತಾಂತ್ರಿಕ ವಿಶ್ವವಿದ್ಯಾಲಯದ ವಿಸಿ ನೇಮಕದ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳನ್ನು ನೇಮಗೊಳಿಸದಿರುವುದು ಒಳ್ಳೆಯದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕುಲಪತಿಯಾಗಿರುವ ರಾಜ್ಯಪಾಲರಿಗೆ ಹಾಗೂ ನೂತನ ವಿಸಿ ಸಿಸಾ ಥಾಮಸ್ ಅವರಿಗೆ ನೋಟಿಸ್ ಕಳುಹಿಸುವಂತೆ ಏಕ ಪೀಠ ಸೂಚಿಸಿದೆ.