ಕಾಸರಗೋಡು: ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ವಿಶ್ವ ರಾಷ್ಟ್ರಗಳ ಮುಂದೆ ಭಾರತದ ಘನತೆ ಎತ್ತಿ ಹಿಡಿಯಲು ಶ್ರಮಿಸಿದ ಕೆಚ್ಚೆದೆಯ ನಾಯಕಿಯಾಗಿದ್ದರು ಎಂದು ಐಕ್ಯರಂಗ ಜಿಲ್ಲಾ ಸಂಚಾಲಕ ಎ.ಗೋವಿಂದನ್ ನಾಯರ್ ತಿಳಿಸಿದ್ದಾರೆ. ಅವರು ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಸಂಸ್ಮರಣಾ ಸಭೆ ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಬಾ ಭಾಯಿ ಪಟೇಲ್ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್, ಯುಡಿಎಫ್ ಜಿಲ್ಲಾ ಕಾರ್ಯದರ್ಶಿ ವಕೀಲ.ಎ.ಗೋವಿಂದನ್ ನಾಯರ್, ಅರ್ಜುನನ್ ತಾಯಲಂಗಾಡಿ, ಚಂದ್ರಶೇಖರನ್ ಮಾಸ್ಟರ್, ಕೆ.ಪಿ.ನಾರಾಯಣನ್ ನಾಯರ್, ಪಿ.ಕೆ.ವಿಜಯನ್, ಉಮೇಶ್ ಅಣಂಗೂರು, ಹನೀಫ ಚೇರಂಗೈ, ಸಿ.ಜಿ.ಟೋನಿ, ಕೆ.ವಿ.ಜೋಶಿ, ಎಸ್.ಉಷಾ, ರಫೀಕ್ ಚೌಕಿ, ವೇಲಾಯುಧನ್, ಕುಞÂಕಣ್ಣನ್, ಮುಕುಂದನ್ ಮಾಸ್ಟರ್, ಪ್ರಣವ್ ಆಳ್ವ, ಶಾಹಿದ್ ಪುಲಿಕ್ಕುನ್ನು, ದಿಲೀಪ್ ಪುಳಿಕ್ಕುನ್ನು, ಚಂದ್ರನ್, ಮೊದಲಾದವರು ಉಪಸ್ಥಿತರಿದ್ದರು.