ಪೆರ್ಲ : ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ 48ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಶ್ರೀ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ನೂತನವಗಿ ನಿರ್ಮಿಸಲಾದ ಶ್ರೀಧರ್ಮಶಾಸ್ತಾ ಭವನದ ಲೋಕಾರ್ಪಣಾ ಸಮಾರಂಭ ಡಿ. 3ರಿಂದ 5ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಶುಭಾಶೀರ್ವಾದ ಹಾಗೂ ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಲಿರುವುದು. ಡಿ. 3ರಂದು ಬೆಳಗ್ಗೆ8.30ಕ್ಕೆ ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರಿಗೆ ಪೂರ್ಣಕುಂಭ ಸ್ವಾಗತ, ಗಣಪತಿ ಹೋಮ, 9.30ಕ್ಕೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಸಂಜೆ 5ರಿಂದ ಸಪ್ತಶುದ್ಧಿ ಪುಣ್ಯಾಹವ, ರಾಕ್ಷೋಘ್ನಹವನ, ವಾಸ್ತುಹವನ, ವಾಸ್ತುಪೂಜೆ, ವಾಸ್ತುಬಲಿ, ರಾತ್ರಿ 8.30ರಿಂದ ನೃತ್ಯ ವೈವಿಧ್ಯ ನಡೆಯುವುದು. ಬೆಳಗ್ಗೆ 9.30ರಿಂದ ರಾತ್ರಿ 9ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯುವುದು.
4ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, 8ಕ್ಕೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನಡೆಯುವುದು. 7.45ರಿಂದ 8.45ರ ಮಧ್ಯೆ ಶ್ರೀಧರ್ಮಶಾಸ್ತಾ ಭವನವನ್ನು ಮಾಣಿಲಶ್ರೀಗಳು ಲೋಕಾರ್ಪಣೆಗೈಯುವರು. 9.30ಕ್ಕೆ ಎಡನೀರುಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 10ಕ್ಕೆ ಧಾರ್ಮಿಕ ಸಭೆ ನಡೆಯುವುದು. ಶ್ರೀ ಅಯ್ಯಪ್ಪ ಸ್ವಾಮಿ ತಿರುವಿಳಕ್ಕ್ ಮಹೋತ್ಸವ ಸಮಿತಿ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ದಿವ್ಯ ಉಪಸ್ಥಿತರಿರುವರು. ಉದ್ಯಮಿ ವಸಂತ ಪೈ ಬದಿಯಡ್ಕ ಅತಿಥಿಯಾಗಿ ಭಾಗವಹಿಸುವರು.
ಸಂಜೆ 6ಕ್ಕೆ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಉಳ್ಳಾಲ್ತಿ(ವಿಷ್ಣುಮೂರ್ತಿ)ದೇವಸ್ಥಾನ ವಠಾರದಿಂದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸದ ವಿಶೇಷ ಪಾಲೆಕೊಂಬು ಉಲ್ಪೆಯ ಭವ್ಯ ಶೋಭಾಯಾತ್ರೆ ನಡೆಯುವುದು. ರಾತ್ರಿ 9ಕ್ಕೆ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ಸನ್ನಿಧಾನಂದನ್ ಗುರುವಾಯೂರ್ ಮತ್ತು ಬಳಗದವರಿಂದ ಭಕ್ತಿಗಾನ ಮೇಳ ನಡೆಯುವುದು. ರಾತ್ರಿ 12ರಿಂದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ವಿಶೇಷ ಕಾರ್ಯಕ್ರಮ, 5ರಂದು ಬೆಳಗ್ಗೆ ಶರಣಂವಿಳಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುವುದು.