HEALTH TIPS

ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ-ಉದುಮದಲ್ಲಿ ನೋಂದಾವಣಾ ಶಿಬಿರ

ಕಾಸರಗೋಡು: ಎಪ್ಪತ್ತು ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ ನೀಡುವ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆಗಾಗಿ ನೋಂದವಣಾ ಶಿಬಿರ ಪಾಲಕುನ್ನುವಿನಲ್ಲಿರುವ ಬಿಜೆಪಿ ಉದುಮ ಪಂಚಾಯಿತಿ ಸಮಿತಿಯ ಕಚೇರಿಯಲ್ಲಿ ಜರುಗಿತು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ. ಕೃಷ್ಣದಾಸ್ ಸಮಾರಂಭ ಉದ್ಘಾಟಿಸಿದರು.  ಬಿಜೆಪಿ ಉದುಮ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಮಧುಸೂದನನ್ ಅಡ್ಕತ್‍ವಯಲ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಮಂಡಲ ಸಮಿತಿ ಉಪಾಧ್ಯಕ್ಷ ತಂಬಾನ್ ಆಚೇರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. 

ಪಂಚಾಯಿತಿ ಸಮಿತಿ ಕಾರ್ಯದರ್ಶಿ ವಿನೀಲಕುಮಾರ್ ಸ್ವಾಗತಿಸಿದರು. ವಿನಯನ್ ಕೊಟ್ಟಿಕುಳಂ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries