ಆಲಿಗಢ: ಲೋಧಾ ಮಾರುಕಟ್ಟೆಯಿಂದ ಗೋಶಾಲೆಗೆ ಮರಳುತ್ತಿದ್ದ ಗೋವುಗಳ ಪಾಲಕ ದಿನೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಗೋಶಾಲೆಯಲ್ಲೇ ವಾಸಿಸುತ್ತಿದ್ದ ಈತನನ್ನು ಅಮರಪುರ ನಹ್ರಾ ಗ್ರಾಮದ ಬಳಿ ಮಾಸ್ಕ್ ಧರಿಸಿದ್ದ ಅಪರಿಚಿತರಿಬ್ಬರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗೋಶಾಲೆ ಪಕ್ಕದಲ್ಲಿದ್ದ ಪಂಚಾಯಿತಿ ಭೂಮಿಯು ಅತಿಕ್ರಮಣಕ್ಕೊಳಗಾಗುವುದನ್ನು ತಪ್ಪಿಸಿದ ನಂತರ, ನಾಲ್ವರಿಂದ ಜೀವ ಬೆದರಿಕೆಯಿದೆ ಎಂದು ದಿನೇಶ್ ಅವರು ಕಳೆದ ಆಗಸ್ಟ್‌ನಲ್ಲೇ ಅಧಿಕಾರಿಗಳಿಗೆ ದೂರು ನೀಡಿದ್ದರು.
ನಾಲ್ವರಲ್ಲಿ ಮೂವರನ್ನು ಉದಯವೀರ್ ಸಿಂಗ್, ನೇಪಾಳ ಸಿಂಗ್ ಮತ್ತು ಪಿಂಕಾ ಎಂದು ಗುರುತಿಸಲಾಗಿದ್ದು, ನಾಲ್ಕನೆ ಆರೋಪಿಯನ್ನು ಗುರುತಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.