ಸಮರಸ ಚಿತ್ರಸುದ್ದಿ: ಮಂಜೇಶ್ವರ: ಉದಿನೂರು ಉನ್ನತ ಪ್ರೌಢ ಶಾಲೆಯಲ್ಲಿ ಜರುಗುತ್ತಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ವಿದ್ಯಾರ್ಥಿ ಗಣೇಶ ಶರ್ಮ ಹಿಂದಿ ಕವಿತಾ ರಚನೆಯಲ್ಲಿ ಕೇರಳ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಬೆಜ್ಜoಗಳ ನಿವಾಸಿ ಶಿವಕುಮಾರ ಪಟ್ಟಾಜೆ ಹಾಗೂ ಶಿಕ್ಷಕಿ ವಾಣಿಶ್ರೀ ಅವರ ಪುತ್ರನಾದ ಪ್ರತಿಭಾವಂತ ವಿದ್ಯಾರ್ಥಿಯನ್ನು ಶಾಲಾ ಮುಖ್ಯ ಶಿಕ್ಷಕಿ ಮೃದುಲಾ ಕೆ.ಎಂ ಹಾಗೂ ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಅಭಿನಂದಿಸಿದ್ದಾರೆ.