HEALTH TIPS

ಲಾಹೋರ್‌ನಲ್ಲಿ ಭೀಕರ ವಾಯುಮಾಲಿನ್ಯ: ಭಾರತವನ್ನು ಟೀಕಿಸಿದ ಪಾಕ್

           ಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ ನಗರದಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, 1.4 ಕೋಟಿ ಜನಸಂಖ್ಯೆ ತತ್ತರಿಸುವಂತೆ ಮಾಡಿದೆ. ದಟ್ಟ ಹೊಗೆ ನಗರದಲ್ಲಿ ಆವರಿಸಿದ್ದು, ಈ ದುಃಸ್ಥಿತಿಗೆ ಭಾರತವನ್ನು ಪಾಕಿಸ್ತಾನದ ಸಚಿವರೊಬ್ಬರು ದೂಷಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

           ದೊಡ್ಡ ಪ್ರಮಾಣದ ಮಾಲಿನ್ಯವನ್ನು ಬಿರುಗಾಳಿಯು ಭಾರತದಿಂದ ಹೊತ್ತು ತರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

          ಭಾನುವಾರ ಎರಡನೇ ಬಾರಿಗೆ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಲಾಹೋರ್ ಪಾತ್ರವಾಗಿದೆ. ಭಾನುವಾರ ಲಾಹೋರ್‌ನ ವಾಯುಗುಣಮಟ್ಟ ಸೂಚ್ಯಂಕವು(ಎಕ್ಯುಐ) ಭೀಕರ 1,067 ಅಂಶಗಳಿಗೆ ಏರಿಕೆಯಾಗಿದೆ.

              ಶೂನ್ಯದಿಂದ 50ರ ನಡುವಿನ ಎಕ್ಯುಐ ಮಟ್ಟವನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 51ರಿಂದ 100ರವರೆಗೆ ತೃಪ್ತಿದಾಯಕ, 101ರಿಂದ 200ರವರೆಗೆ ಮಧ್ಯಮ, 201ರಿಂದ 300ರವರೆಗೆ ಕಳಪೆ, 301ರಿಂದ 400 ಅತ್ಯಂತ ಕಳಪೆ ಮತ್ತು 401ರಿಂದ ಮೇಲ್ಪಟ್ಟ ಎಕ್ಯುಐ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

              ಭೀಕರ ಮಾಲಿನ್ಯದ ಪರಿಣಾಮವಾಗಿ, ಲಾಹೋರ್‌ನ ಅಧಿಕಾರಿಗಳು ಇಂದಿನಿಂದ ಒಂದು ವಾರದವರೆಗೆ ಶಾಲೆಗೆ ರಜೆ ಘೋಷಿಸಿದ್ದಾರೆ. ಗ್ರೀನ್‌ ಲಾಕ್‌ಡೌನ್ ಭಾಗವಾಗಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಶೇಕಡ 50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದೆ.

ಮಾಲಿನ್ಯ ಉಂಟುಮಾಡುವ ಉಪಕರಣ ಬಳಕೆ, 2 ಸ್ಟ್ರೋಕ್ ಇಂಜಿನ್ ವಾಹನಗಳು, ಬಯಲಲ್ಲೇ ಬೆಂಕಿ ಹಾಕಿ ಆಹಾರ ತಯಾರಿಸುವ ಬೀದಿ ಬದಿ ಹೋಟೆಲ್‌ಗಳನ್ನು ಮುಚ್ಚಿಸಲಾಗಿದೆ.

         ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಂಜಾಬ್ ಪ್ರಾಂತ್ಯದ ಹಿರಿಯ ಸಚಿವೆ ಮರಿಯುಮ್ ಔರಂಗಜೇಬ್, ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಜೊತೆ ಮಾತುಕತೆಗೆ ಕರೆ ನೀಡಿದರು, ಅಧಿಕಾರಿಗಳು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮೂಲಕ ಭಾರತದ ಜೊತೆ ಮಾತುಕತೆಯನ್ನು ನಡೆಸುತ್ತಾರೆ ಎಂದು ಹೇಳಿದರು.

            'ಭಾರತದೊಂದಿಗೆ ಮಾತುಕತೆಯಿಲ್ಲದೆ ಈ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ ಎಂದ ಅವರು, ಲಾಹೋರ್‌ನ ನಿವಾಸಿಗಳಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಲು, ಮನೆಯೊಳಗೆ ಉಳಿಯಲು ಮತ್ತು ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿರಲು ಸಲಹೆ ನೀಡಿದ್ದರು.

ಭಾರತದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ವಾಯು ಮಾಲಿನ್ಯಕ್ಕೆ ಪ್ರಮುಖಕಾರಣವಾಗಿದ್ದು, ಇದೊಂದು ದೊಡ್ಡ ತಲೆನೋವು ಎಂದು ಪಂಜಾಬ್‌ ಪ್ರಾಂತ್ಯದ ಅಧಿಕಾರಿ ರಾಜಾ ಜಹಾಂಗೀರ್ ಅನ್ವರ್ ದೂಷಿಸಿದ್ದಾರೆ.

             ಮಾಲಿನ್ಯದ ವಿರುದ್ಧ ಭಾರತದೊಂದಿಗೆ ಒಗ್ಗಟ್ಟಿನ ಪ್ರಯತ್ನಗಳಿಗೆ ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಕರೆ ನೀಡಿದ್ದರು. ಇದು ಎರಡು ದೇಶಗಳ ಸಾಮಾನ್ಯ ಶತ್ರು ಎಂದಿದ್ದ ಅವರು, ಇದು ರಾಜಕೀಯವಲ್ಲ. ಮಾನವೀಯತೆಯಿಂದ ಸಮಸ್ಯೆ ಬಗೆಹರಿಸಬೇಕಿದೆ ಎಂದು ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries