ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಮ್ಮ ಜೀವನ ಶೈಲಿ ಎಷ್ಟೊಂದು ರೀತಿಯಲ್ಲಿ ಕಾರಣವಾಗುತ್ತಿದೆ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ನಮ್ಮ ಕೆಲವೊಂದು ತಪ್ಪಾದ ಕೆಲಸಗಳು ನಮ್ಮ ಅನಾರೋಗ್ಯ ಸಮಸ್ಯೆಗೆ ಕಾರಣವಾಗುವುದು ನೋಡಲಿದ್ದೇವೆ. ಅದರಲ್ಲಿ ನಮ್ಮ ಊಟ, ತಿಂಡಿ, ನಮ್ಮ ಜೀವನ ಶೈಲಿ ಕಾರಣವಾಗುತ್ತಿದೆ. ನಮ್ಮ ದೈನಂದಿನ ಕೆಲಸ ಕಾರ್ಯಗಳು ನಮ್ಮ ಆರೋಗ್ಯ ನಿರ್ಧರಿಸುತ್ತವೆ.
ಹೀಗೆ ನೋಡುವುದಾದರೆ ನಾವು ಮಲಗುವ ಶೈಲಿ ನಮ್ಮ ಹಲವು ರೀತಿಯ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ನಾವು ಯಾವ ಭಂಗಿಯಲ್ಲಿ ಮಲಗುತ್ತೇವೆ ಅನ್ನೋದು ಕೂಡ ನಮ್ಮ ಆರೋಗ್ಯಕ್ಕೆ ಕಾರಣವಾಗಿರುತ್ತದೆ. ನಮ್ಮ ಬೆನ್ನು ನೋವು, ಕುತ್ತಿಗೆ ನೋವಿನಂತಹ ಸಮಸ್ಯೆಗೂ ನೀವು ಒಳಗಾಗಬಹುದು. ಹಾಗೆ ನೀವು ಮಲಗಲು ಬಳಸುವ ಹಾಸಿಗೆ ಮಾತ್ರವಲ್ಲ ದಿಂಬುಗಳು ಕೂಡ ನಿಮ್ಮ ಆರೋಗ್ಯದ ಪ್ರತೀಕವಾಗಲಿದೆ.
ಹಾಸಿಗೆಗೆ ಬಳಸುವ ದಿಂಬು ನಿಮ್ಮಲ್ಲಿ ಹಲವು ರೀತಿಯ ಸಮಸ್ಯೆಗೆ ತಳ್ಳಬಹುದು. ಹಾಗಾದ್ರೆ ನಾವು ದಿಂಬನ್ನು ಯಾವಾಗ ಬದಲಾಯಿಸಬೇಕು ಎಂಬುದು ನಿಮಗೆ ಗೊತ್ತಾ? ಹೌದು ನಾವು ಬಳಸುವ ದಿಂಬುಗಳನ್ನು ನಾವು ಆಗಾಗ ಬದಲಿಸಬೇಕು. ಇದು ನಮ್ಮ ಅನಾರೋಗ್ಯಕ್ಕೆ ಬಹಳಷ್ಟು ಕೊಡುಗೆ ನೀಡುತ್ತಲಿದೆ. ಹೀಗಾಗಿ ನಾವಿಂದು ಈ ದಿಂಬುಗಳನ್ನು ಬದಲಿಸುವ ಸರಿಯಾದ ಸಮಯ ಕುರಿತಂತೆ ತಿಳಿದುಕೊಳ್ಳೋಣ.
ನಾವು ಬಹುತೇಕ ಒಂದೇ ದಿಂಬನ್ನು ಬಹಳ ವರ್ಷಗಳ ಕಾಲ ಬಳಸುತ್ತೇವೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಏಕೆಂದರೆ ನಮಗೆ ಅನೇಕ ಸಮಸ್ಯೆಗಳನ್ನು ತರಲು ಈ ಹಳೆಯ ದಿಂಬುಗಳ ಕೊಡುಗೆ ಇದ್ದೇ ಇರುತ್ತದೆ.
ನೀವು ಎಷ್ಟು ಬಾರಿ ದಿಂಬುಗಳನ್ನು ಬದಲಾಯಿಸಬೇಕು? ಹಾಗೂ ಯಾವಾಗ?
ನೀವು ಅತ್ಯುತ್ತಮ ನಿದ್ರೆ ಮಾಡಬೇಕು, ನಿದ್ರೆಯ ಗುಣ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂಬ ಬಯಕೆಯಲ್ಲಿದ್ದರೆ ನೀವು ಮಲಗುವ ಹಾಸಿಗೆ ಹಾಗೂ ದಿಂಬನ್ನು ಬದಲಾಯಿಸುತ್ತಿರಬೇಕು. ನಿಮ್ಮ ನಿದ್ರೆಯಲ್ಲಿ ಹಾಸಿಗೆ ಮಾತ್ರವಲ್ಲ ದಿಂಬು ಕೂಡ ಕೊಡುಗೆ ನೀಡುತ್ತದೆ, ಹಾಗೆ ಪ್ರಮುಖ ಪಾತ್ರ ವಹಿಸಲಿದೆ. ದಿಂಬಿನಲ್ಲಿ ಧೂಳು, ಕೊಲೆ, ಬೆವರು, ಹುಳು ಹೀಗೆ ಯಾವುದಾದರೊಂದು ಸಮಸ್ಯೆಗಳಿದ್ದರೆ ಬದಲಾಯಿಸುವುದು ಉತ್ತಮವಂತೆ.
ದಿಂಬು ಕೊಳೆಯಾಗಿದೆ ಎಂಬ ಕಾರಣಕ್ಕೆ ಅದನ್ನು ತೊಳೆದು ಒಣಗಿಸಿ ಮತ್ತೆ ಬಳಸಲಾಗುತ್ತದೆ. ಆದ್ರೆ ಅದಕ್ಕಿಂತ ದಿಂಬನ್ನು ಬದಲಾಯಿಸುವುದೇ ಅತ್ಯಂತ ಆರೋಗ್ಯಕರ ವಿಧಾನಗಳಲ್ಲಿ ಒಂದಾಗಿದೆ. ಈ ರೀತಿಯ ದಿಂಬಿನ ಬಳಕೆ ನಿದ್ರೆ ಹಾಳಿಗೆ ಮಾತ್ರ ಕಾರಣವಲ್ಲ ಬದಲಿಗೆ ನಿಮ್ಮಲ್ಲಿ ಅಲರ್ಜಿ, ಶೀತ, ತಲೆ ನೋವು, ಕುತ್ತಿಗೆ ನೋವು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ದಾರಿಯಾಗುತ್ತಿದೆ. ಸಾಮಾನ್ಯವಾಗಿ ದಿಂಬುಗಳ ನಿರ್ಮಾಣಕ್ಕೆ ಹತ್ತಿಗಳ ಬಳಸಲಾಗುತ್ತದೆ. ಹತ್ತಿಗಳ ಜೀವಿತಾವಧಿ ಸುಮಾರು 1ರಿಂದ 2 ವರ್ಷ ಇರಬಹುದು. ತದನಂತರ ಹತ್ತಿ ಕೆಡಲು ಆರಂಭಿಸುತ್ತದೆ. ನಿಮ್ಮ ದಿಂಬು ಒಂದು ರೀತಿ ವಾಸನೆ ಬರಲು ಆರಂಭಿಸಿದರೆ ಅದನ್ನು ಬದಲಿಸುವ ಸಮಯವಾಗಿದೆ ಎಂದರ್ಥ. ಹಾಗೆ 2 ವರ್ಷದ ಬಳಿಕ ಈ ದಿಂಬುಗಳನ್ನು ತೊಳೆದು ಕೂಡ ಬಳಸಬಾರದು.
ದಿಂಬುಗಳನ್ನು ತೊಳೆಯುವುದರಿಂದ ಅದರಲ್ಲಿನ ಮೃದುತ್ವ ಹೊರಟು ಹೋಗುತ್ತದೆ. ಹಾಗೆ ಇದು ಒರಾಟಾಗುವುದುರಿಂದ ಕುತ್ತಿಗೆ ನೋವಿನ ಅನುಭವ ಉಂಟಾಗಲಿದೆ. ಅಲ್ಲದೆ, ದಿಂಬುಗಳು ಚರ್ಮದ ಎಣ್ಣೆಗಳು, ಸತ್ತ ಚರ್ಮದ ಕೋಶಗಳು, ಮುಖ ಮತ್ತು ಕೂದಲಿನ ಉತ್ಪನ್ನದ ಅವಶೇಷಗಳು, ಶಿಲೀಂಧ್ರಗಳು ಮತ್ತು ಧೂಳಿನ ಹುಳಗಳಂತಹ ವಸ್ತುಗಳನ್ನು ಎಲ್ಲಾ ಸಮಯದಲ್ಲೂ ಹೀರಿಕೊಳ್ಳುವುದರಿಂದ ನಿಮಗೆ ಬಹಳಷ್ಟು ಅಲರ್ಜಿಗಳು ಮತ್ತು ಸೋಂಕುಗಳನ್ನು ಉಂಟುಮಾಡಬಹುದು. ಹೀಗಾಗಿ ನಾವು ನಿಯಮಿತವಾಗಿ ದಿಂಬುಗಳನ್ನು ಬದಲಾಯಿಸುತ್ತಿರಬೇಕು. ಇಲ್ಲದಿದ್ದರೆ ಸಮಸ್ಯೆಗಳನ್ನು ನಾವೇ ತಂದುಕೊಳ್ಳುತ್ತೇವೆ.