ಪತ್ತನಂತಿಟ್ಟ: ಶಬರಿಮಲೆ ಯಾತ್ರಿಕರ ಪ್ರಶ್ನೆಗಳಿಗೆ ಉತ್ತರಿಸಲು ಸ್ವಾಮಿ ಎಐ ಚಾಟ್‍ಬಾಟ್ ಸಿದ್ಧವಾಗಿದೆ. ಸಿಸ್ಟಮ್ ಆರು ಭಾಷೆಗಳಲ್ಲಿ ಪ್ರತಿಕ್ರಿಯಿಸಬಹುದು.
ಈ ಆ್ಯಪ್ ಮೂಲಕ ಯಾತ್ರಾರ್ಥಿಗಳು ಸನ್ನಿಧಿಯ ದಟ್ಟಣೆ, ತುಪ್ಪಾಭಿಷೇಕ ಸಮಯ ಮತ್ತು ಹೋಟೆಲ್ ಆಹಾರ ದರಗಳು ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. . ಸ್ವಯಂಚಾಲಿತ ವ್ಯವಸ್ಥೆಯಿಂದ ತಕ್ಷಣವೇ ಉತ್ತರ ಲಭ್ಯವಾಗುವುದು.
ಶಬರಿಮಲೆಯಲ್ಲಿ ಜನಸಂದಣಿ ನಿಯಂತ್ರಿಸಲು ಪ್ರತಿ ದಿನದ ಬುಕಿಂಗ್ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಪೋಲೀಸರಿಗೆ ಮುಂಚಿತವಾಗಿ ನೀಡುವ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಾರಿ ಯಾತ್ರಾರ್ಥಿಗಳ ವಾಹನಗಳನ್ನು ದಾರಿಯಲ್ಲಿ ತಡೆಯುವುದಿಲ್ಲ. ಯಾತ್ರೆಯನ್ನು ದೂರು ರಹಿತವಾಗಿಸಲು ನಾಲ್ಕು ತುರ್ತು ನಿರ್ವಹಣಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.