ಪತ್ತನಂತಿಟ್ಟ: ಮಂಡಲ- ಮಕರಜ್ಯೋತಿ ಪೂಜೆಗೆ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲ ನ.15ರಂದು ತೆರೆಯಲಿದೆ. ಹೊಸ ತೀರ್ಥ ಯಾತ್ರೆ ಪರ್ವದ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಅಯ್ಯಪ್ಪ ಭಕ್ತರನ್ನು ಸ್ವಾಗತಿಸಲು ಕೇರಳವು ಸಜ್ಜಾಗಿದೆ. ಎಲ್ಲ ಯಾತ್ರಾರ್ಥಿಗಳಿಗೆ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಸನ್ನಿಧಾನದಲ್ಲಿ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈ ಬಾರಿ ಮಂಡಲ ತೀರ್ಥಯಾತ್ರೆಯ ಮೊದಲ ದಿನದಿಂದ 18 ಗಂಟೆಗಳ ದರ್ಶನ ಸೌಲಭ್ಯ ಒದಗಿಸಲಾಗುವುದು. ನ.16ರ ವೃಶ್ಚಿಕ 1 ರಂದು ಬೆಳಗ್ಗೆ ಮೂರು ಗಂಟೆಗೆ ದೇಗುಲ ತೆರೆಯಲಾಗುವುದು. ಮಧ್ಯಾಹ್ನದ ಪೂಜೆಯ ಬಳಿಕ 1 ಗಂಟೆಗೆ ದೇಗುಲ ಮುಚ್ಚಲಾಗುವುದು. ಸಂಜೆ 3ಗಂಟೆಗೆ ಮತ್ತೆ ತೆರೆದು ರಾತ್ರಿ 11 ಗಂಟೆಗೆ ಮುಚ್ಚಲಾಗುವುದು.
ಶಬರಿಮಲೆಯಲ್ಲಿ ವರ್ಚುವಲ್ ಕ್ಯೂ ಮೂಲಕ ಪ್ರತಿದಿನ ದರ್ಶನ ಸೌಲಭ್ಯ ಪಡೆಯುವ ಭಕ್ತರ ಸಂಖ್ಯೆಯನ್ನು 70 ಸಾವಿರ ಮಂದಿಗೆ ಸೀಮಿತಗೊಳಿಸಲಾಗಿದೆ. ಬುಕ್ ಮಾಡದ 10 ಸಾವಿರ ಮಂದಿಗೆ ತತ್ಕಾಲ್ ಆನ್‍ಲೈನ್ ಬುಕಿಂಗ್ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ ಆಧಾರ್ ಕಾರ್ಡ್ ಪ್ರತಿ ತರಬೇಕು. 18 ಮೆಟ್ಟಿಲ ಮೂಲಕ ಪ್ರತಿ ನಿಮಿಷ 75 ಯಾತ್ರಿಕರನ್ನು ದಾಟಿಸಲಾಗುವುದು.ಇಲ್ಲಿ ಅನುಭವಿ ಹಾಗೂ ಯುವ ಪೆÇಲೀಸರನ್ನು ನಿಯೋಜಿಸಲಾಗುವುದು.
ಶಬರಿಮಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಅಧಿಕಾರಿಗಳು ಸೇರಿದಂತೆ 13,600 ಪೆÇಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಹೆಚ್ಚಿನ ಸಿಸಿ ಕ್ಯಾಮೆರಾಳನ್ನು ಅಳವಡಿಸಲಾಗುವುದು. ಲೋಕೋಪಯೋಗಿ ರಸ್ತೆಗಳ ನಿರ್ವಹಣೆ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಮೊಬೈಲ್ ನೆಟ್ವರ್ಕ್ ಕವರೇಜ್ ಹೆಚ್ಚಿಸಲು ಬಿಎಸ್ ಎನ್ ಎಲ್ 22 ಮೊಬೈಲ್ ಟವರ್‍ಗಳನ್ನು ಸಿದ್ಧಪಡಿಸಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೆÇಲೀಸ್ ಏಡ್ ಪೋಸ್ಟ್ ತೆರೆಯಲಾಗುವುದು.
ಕಾನನ ಹಾದಿಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು. ಅರಣ್ಯ ಇಲಾಖೆ ಇಲ್ಲಿ 132 ಸೇವಾ ಕೇಂದ್ರಗಳನ್ನು ತೆರೆಯಲಿದೆ. ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು 1500 ಎಕೋ ಗಾರ್ಡ್‍ಗಳನ್ನು ನಿಯೋಜಿಸಲಾಗುವುದು. ಎಲಿಫೆಂಟ್ ಸ್ಕ್ವಾಡ್, ಹಾವು ಹಿಡಿಯುವವರ ಸೇವೆಯೂ ಲಭ್ಯವಿದೆ.
ಅಗ್ನಿಶಾಮಕ ದಳ ಈ ಬಾರಿ ಹೆಚ್ಚಿನ ಸಿಬ್ಬಂದಿಯನ್ನು ವಿವಿಧೆಡೆ ನಿಯೋಜಿಸಲಿದೆ. 2,500 ಆಪ್ತಮಿತ್ರ ಸ್ವಯಂಸೇವಕರ ಸೇವೆಯೂ ಲಭ್ಯವಾಗಲಿದೆ. ಮಾಹಿತಿ ವಿನಿಮಯ ಮತ್ತು ತ್ವರಿತ ಕ್ರಮ ಕೈಗೊಳ್ಳಲು ಅಗ್ನಿಶಾಮಕ ದಳ ಹೊಸ ವಾಕಿ ಟಾಕಿ ವ್ಯವಸ್ಥೆಯನ್ನು ಪರಿಚಯಿಸಿದೆ. ಮಕರ ಜ್ಯೋತಿ ವೀಕ್ಷಣಾ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಸ್ಕೂಬಾ ತಂಡದ ಸೇವೆಯೂ ಲಭ್ಯವಾಗಲಿದೆ.
ಯಾತ್ರಾರ್ಥಿಗಳು ತಲುಪುವ ಎಲ್ಲ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರು ಒದಗಿಸಲು ಜಲಮಂಡಳಿ ಕ್ರಮ ಕೈಗೊಂಡಿದೆ. ಚೆಂಗನ್ನೂರು, ಎರುಮೇಲಿ, ಪಂಪಾ ಸೇರಿದಂತೆ ಎಲ್ಲ ಸ್ನಾನಘಟ್ಟಗಳಲ್ಲಿ ನೀರಾವರಿ ಇಲಾಖೆ ಸುರಕ್ಷತಾ ಬೇಲಿಗಳನ್ನು ನಿರ್ಮಿಸಿದೆ. ವಿವಿಧ ಭಾμÉಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಪಂಪಾಕ್ಕೆ ಸರಬರಾಜಾಗುವ ನೀರಿನ ಗುಣಮಟ್ಟವನ್ನು ಜಲ ಪ್ರಾಧಿಕಾರದ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಮೂಲಕ ಪ್ರತಿ ಗಂಟೆ ಪರೀಕ್ಷಿಸಲಾಗುವುದು.
ನೈರ್ಮಲ್ಯ ಮಿಷನ್, ಸ್ಥಳೀಯಾಡಳಿತ ಮತ್ತು ಸಂಸ್ಥೆಗಳ ನೇತೃತ್ವದಲ್ಲಿ, ತ್ಯಾಜ್ಯ ನಿರ್ವಹಣೆಗೆ ವ್ಯಾಪಕವಾದ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ. 1,000 ಶುಚಿತ್ವ ಸಿಬ್ಬಂದಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನೈರ್ಮಲ್ಯ ಮಿಷನ್ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಜಾಗೃತಿ ಮೂಡಿಸಲಿದೆ. ಜವಳಿ ತ್ಯಾಜ್ಯ ತೆಗೆಯಲು ಗ್ರೀನ್ ಗಾರ್ಡ್‍ಗಳನ್ನು ನೇಮಿಸಲಾಗುವುದು ಚಂಗನಾಶ್ಶೇರಿ ನಗರಸಭೆ ಮತ್ತು ಕುಮಾರಕಂ ಪಂಚಾಯಿತಿಯ ಮೊಬೈಲ್ ಸೆಪ್ಟಿಕ್ ಟ್ಯಾಂಕ್ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಬಳಸಲಾಗುವುದು.
ಆರೋಗ್ಯ ಇಲಾಖೆಯು ನಿಲಕ್ಕಲ್, ಸನ್ನಿಧಾನಂ, ಕೊಟ್ಟಾಯಂ ಮೆಡಿಕಲ್ ಕಾಲೇಜು, ಪತ್ತನಂತಿಟ್ಟ ಜನರಲ್ ಆಸ್ಪತ್ರೆ ಮತ್ತು ಕಾಂuಟಿಜeಜಿiಟಿeಜರಪಳ್ಳಿ ಜನರಲ್ ಆಸ್ಪತ್ರೆಯಲ್ಲಿ ಭಕ್ತರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಗಳು ಮತ್ತು ಇತರ ಸೌಲಭ್ಯಗಳನ್ನು ಖಚಿತಪಡಿಸಲಾಗುವುದು. ಪಂಪಾ, ಅಪ್ಪಾಚ್ಚಿಮೇಡು, ಸನ್ನಿಧಾನಂ, ಪತ್ತನಂತಿಟ್ಟ ಜನರಲ್ ಆಸ್ಪತ್ರೆ, ಕೊಟ್ಟಾಯಂ ಮೆಡಿಕಲ್ ಕಾಲೇಜು ಮತ್ತು ಕಾಂuಟಿಜeಜಿiಟಿeಜರಪಳ್ಳಿ ಜನರಲ್ ಆಸ್ಪತ್ರೆಗಳಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳಿವೆ.
ಈ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗಾಗಿ ವಿಶೇಷ ವಾರ್ಡ್‍ಗಳು ಮತ್ತು ಮಾಹಿತಿ ಕೇಂದ್ರಗಳನ್ನು ತೆರೆಯಲಾಗುವುದು. ಹಾವಿನ ಕಡಿತಕ್ಕೊಳಗಾದವರಿಗೆ ಆ್ಯಂಟಿವೆನಮ್ ಸೇರಿದಂತೆ ಚಿಕಿತ್ಸಾ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. ವಿಶ್ವವಿಖ್ಯಾತ ನರಶಸ್ತ್ರಚಿಕಿತ್ಸಕ ಡಾ.ರಾಮನಾರಾಯಣನ್ ಅವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ತಜ್ಞ ವೈದ್ಯರು "ಡಿವೋಟೀಸ್ ಆಫ್ ಡಾಕ್ಟರ್ಸ್" ಹೆಸರಿನಲ್ಲಿ ಉಚಿತ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು. ಪಂಪಾ ಮತ್ತು ಸನ್ನಿಧಾನಂನಲ್ಲಿ ಎಕೋ ಕಾರ್ಡಿಯೋಗ್ರಾಮ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳೊಂದಿಗೆ ವೈದ್ಯರ ಸೇವೆ ಲಭ್ಯವಿದೆ.
ಮೋಟಾರು ವಾಹನ ಇಲಾಖೆಯು ಸೇಫ್ ಝೋನ್ ಯೋಜನೆಯನ್ನು ವಿಸ್ತರಿಸಲಿದೆ. ಗಸ್ತು ತಿರುಗಲು 20 ಸ್ಕ್ವಾಡ್‍ಗಳನ್ನು ನಿಯೋಜಿಸಲಾಗುವುದು. ಮೂರು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುವುದು. ಇಲ್ಲಿ 24 ಗಂಟೆಗಳ ಸೇವೆ ಲಭ್ಯವಿದೆ. ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಲು ರಿಕವರಿ ವೆಹಿಕಲ್ ಸೇವೆ ಒದಗಿಸಲಾಗುವುದು. ಕೆ.ಎಸ್.ಆರ್.ಟಿ.ಸಿ.ವಿಶೇಷ ಸರಣಿ ಸೇವೆಗಳನ್ನು ಒದಗಿಸಲಿದೆ. ಥೇಣಿ-ಪಂಪಾ ವಲಯದಲ್ಲಿ ಹೆಚ್ಚಿನ ಸೇವೆ ಒದಗಿಸಲಾಗುವುದು.
ಆಹಾರದ ಬೆಲೆಗಳನ್ನು ಆರು ಭಾμÉಗಳಲ್ಲಿ ಪ್ರದರ್ಶಿಸಲಾಗುವುದು. ಆಹಾರದ ಗುಣಮಟ್ಟ, ಪ್ರಮಾಣ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಇಲಾಖೆ ಮತ್ತು ಲೀಗಲ್ ಮೆಟ್ರೋಲಜಿ ಇಲಾಖೆ ಜಂಟಿ ತಪಾಸಣೆ ನಡೆಸಲಿದೆ. ಚೆಕ್‍ಪೆÇೀಸ್ಟ್‍ಗಳಲ್ಲೂ ತಪಾಸಣೆ ಬಿಗಿಗೊಳಿಸಲಾಗುವುದು. ಮಾದಕ ದ್ರವ್ಯ ಬಳಕೆ ತಡೆಯಲು ಅಬಕಾರಿ ಮತ್ತು ಪೆÇಲೀಸ್ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಲಿದ್ದಾರೆ.
ಕಾನನ ಹಾದಿ ಸೇರಿದಂತೆ ಅಡೆತಡೆಯಿಲ್ಲದೆ ವಿದ್ಯುತ್ ನೀಡಲು ಕೆಎಸ್‍ಇಬಿ ಕ್ರಮಗಳನ್ನು ಕೈಗೊಳ್ಳಲಿದೆ. ಯಾತ್ರಾರ್ಥಿಗಳಿಗೆ ವಿಶ್ರಾಂತಿ ಪಡೆಯಲು ಮರಕ್ಕೂಟ್ಟಂನಿಂದ ಸನ್ನಿಧಾನದವರೆಗೆ 1,000 ಸ್ಟೀಲ್ ಕುರ್ಚಿಗಳನ್ನು ಅಳವಡಿಸಲಾಗುವುದು. ಇಲ್ಲಿ ಕುಡಿಯುವ ನೀರು, ಇ-ಟಾಯ್ಲೆಟ್ ಸೇರಿದಂತೆ ಸೌಲಭ್ಯ ಲಭಿಸುವುದು.
ವಿಪತ್ತು ನಿರ್ವಹಣಾ ಇಲಾಖೆ ವಿಶೇಷ ವಿಪತ್ತು ನಿರ್ವಹಣಾ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಪತ್ತನಂತಿಟ್ಟ ವಿಪತ್ತು ನಿರ್ವಹಣಾ ಸಮಿತಿಗೆ 17 ಲಕ್ಷ ರೂ.ಮಂಜೂರು ಮಾಡಲಾಗಿದೆ. ವಿಪತ್ತು ಪರಿಹಾರ ಕಾರ್ಯಾಚರಣೆಗೆ ಕಂದಾಯ ಇಲಾಖೆಯ 90 ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಈ ಬಾರಿ ಯಾತ್ರಾರ್ಥಿಗಳಿಗೆ ಯಥೇಚ್ಛ ಅರವಣ ಮತ್ತು ಅಪ್ಪಂ ಲಭ್ಯವಾಗಲಿದೆ. ಈ ಬಾರಿ ಸನ್ನಿಧಾನದಲ್ಲಿ 20 ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಯಾತ್ರಾರ್ಥಿಗಳಿಗೆ ಮೊಬೈಲ್ ಮೆಸೇಜ್ ಮೂಲಕ ಮಾಹಿತಿ ನೀಡಲು ದೇವಸ್ವಂ ಮಂಡಳಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ
ನಿಲಕ್ಕಲ್ ನಲ್ಲಿ ಈ ಬಾರಿ ಫಾಸ್ಟ್ ಟ್ಯಾಗ್ ಮೂಲಕ 10 ಸಾವಿರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪಂಪಾ ಬೆಟ್ಟ ಹಾಗೂ ಚಕ್ಕುಪಾಲಂನಲ್ಲಿ ವಾಹನ ನಿಲುಗಡೆಗೆ ನ್ಯಾಯಾಲಯದ ಅನುಮತಿ ಪಡೆಯಲಾಗುವುದು. ಎರುಮೇಲಿಯಲ್ಲಿ ಹೌಸಿಂಗ್ ಬೋರ್ಡ್ ಒಡೆತನದ 6.5 ಎಕರೆ ಜಮೀನು ವಾಹನ ನಿಲುಗಡೆಗೆ ಬಳಕೆಯಾಗಲಿದೆ.
ಸನ್ನಿಧಾನದಲ್ಲಿ 1,005, ನಿಲಕ್ಕಲ್‍ನಲ್ಲಿ 1,045 ಮತ್ತು ಪಂಪಾದಲ್ಲಿ 580 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರಿಗಾಗಿ 100 ಶೌಚಾಲಯ ಮೀಸಲಿಡಲಾಗಿದೆ. ಸಾಂಪ್ರದಾಯಿಕ ರಸ್ತೆ ಮತ್ತು ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ 50ಕ್ಕೂ ಹೆಚ್ಚು ಜೈವಿಕ ಶೌಚಾಲಯ ಹಾಗೂ ಜೈವಿಕ ಮೂತ್ರಾಲಯಗಳನ್ನು ತೆರೆಯಲಾಗಿದೆ. ಸನ್ನಿಧಾನದ ಶಬರಿ ಅತಿಥಿ ಗೃಹ, ದೇವಸ್ವಂ ಸಿಬ್ಬಂದಿಯ ವಸತಿಗೃಹ, ಪಂಪಾದ ಅತಿಥಿಗೃಹಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ.
16,000 ಭಕ್ತರಿಗೆ ಏಕಕಾಲದಲ್ಲಿ ವಿಶ್ರಾಂತಿ:
ಶಬರಿಮಲೆ ದರ್ಶನಕ್ಕೆ ತಲುಪುವ ಭಕ್ತರಿಗೆ ವಿಶ್ರಾಂತಿ ಪಡೆಯಲು ತಾತ್ಕಾಲಿಕ ಟೆಂಟ್ ನಿರ್ಮಿಸಲು ಸೌಕರ್ಯ ಒದಗಿಸಲಾಗಿದೆ. 16,000 ಭಕ್ತರು ಏಕಕಾಲದಲ್ಲಿ ವಿವಿಧೆಡೆ ವಿಶ್ರಾಂತಿ ಪಡೆಯಬಹುದು. ನಿಲಕ್ಕಲ್‍ನ ಟಾಟಾದ ಐದು ಶೆಡ್‍ಗಳಲ್ಲಿ 5,000, ಮಹಾದೇವ ಕ್ಷೇತ್ರದ ಪಾದಚಾರಿ ಮಾರ್ಗದಲ್ಲಿ 1,000, ನಿಲಕ್ಕಲ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ 3,000 ಮಂದಿಗೆ ತಾತ್ಕಾಲಿಕ ಟೆಂಟ್ ನಿರ್ಮಿಸಲು ಜರ್ಮನ್ ಚಪ್ಪರ ಹಾಕಲಾಗಿದೆ. ಪಂಪಾದ ನಾಲ್ಕು ಹೊಸ ಪಾದಚಾರಿ ಮಾರ್ಗಗಳಲ್ಲಿ 4,000, ರಾಮಮೂರ್ತಿ ಮಂಟಪದ ಬದಲು ಇನ್ನೂ 3,000 ಮಂದಿಗೆ ಸ್ಥಳಾವಕಾಶ ಕಲ್ಪಿಸಿರುವುದು ಭಕ್ತರಿಗೆ ಸಹಕಾರಿಯಾಗಲಿದೆ.
ಬಿಸಿ ನೀರು, ಶುಂಠಿ ಕಷಾಯ, ಬಿಸ್ಕತು:್ತ
ಭಕ್ತರು ಸರತಿ ಸಾಲು ನಿಲ್ಲುವ ಬ್ಯಾರಿಕೇಡ್‍ಗಳಲ್ಲಿ ಕಿಯೋಸ್ಕ್‍ಗಳ ಮೂಲಕ ಬಿಸಿನೀರು ಒದಗಿಸಲು ಪೈಪ್‍ಗಳನ್ನು ಅಳವಡಿಸಲಾಗಿದೆ. ಶರಂಗುತ್ತಿಯಿಂದ ದೊಡ್ಡ ನಡಪ್ಪಂದಲ್ ವರೆಗೆ ಬಿಸಿನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಾಗುವುದು. 2,000 ಸ್ಟೀಲ್ ಬಾಟಲ್ ಗಳಲ್ಲಿ ಶುಂಠಿ ಕμÁಯ ತುಂಬಿಸಿ ಮಲೆ ಏರುವ ಭಕ್ತರಿಗೆ ನೀಡಲಾಗುವುದು. ಮಲೆ ಇಳಿದು ಬರುವಾಗ ಸ್ಟೀಲ್ ಬಾಟಲ್ ಹಿಂತಿರುಗಿಸಬೇಕು. ಭಕ್ತರ ಅನುಕೂಲಕ್ಕಾಗಿ ಸನ್ನಿಧಾನದಿಂದ ಶರಂಗುತ್ತಿವರೆಗೆ ಸುಮಾರು 60 ಶುಂಠಿ ಕμÁಯ ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ. ಶರಂಗುತ್ತಿಯ ಬಾಯ್ಲರ್ ಸಾಮಥ್ರ್ಯವನ್ನು ಪ್ರತಿ ಗಂಟೆಗೆ 4,000 ಲೀ.ನಿಂದ 10,000 ಲೀ.ಗೆ ಹೆಚ್ಚಿಸಲಾಗಿದೆ. ಭಕ್ತರಿಗೆ ನೀಡಲು 50 ಲಕ್ಷ ಬಿಸ್ಕತ್ ಪ್ಯಾಕೆಟ್ ಇರಿಸಲಾಗಿದೆ.