ಕಾಸರಗೊಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಪರಪ್ಪ ಕಛೇರಿಯ ಅಧೀನದಲ್ಲಿ ಕಣ್ಣೂರು ಜಿಲ್ಲೆಯ ಪೆರಿಂಗೊಂನಲ್ಲಿ ಕಾರ್ಯಾಚರಿಸುತ್ತಿರುವ ಕರಿಂದಳಂ ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಜೂನಿಯರ್ ಹೆಲ್ತ್ ನರ್ಸ್ ನೇಮಕಾತಿಗಾಗಿ ಪರಿಶಿಷ್ಟ ವರ್ಗದ ಉದ್ಯೋಗಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇರಳ ನರ್ಸ್ ಮತ್ತು ಮಿಡ್‍ವೈವ್ಸ್ ಕೌನ್ಸಿಲ್ ಅಥವಾ ನಸಿರ್ಂಗ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಎನ್‍ಎನ್‍ಎಂ ಪ್ರಮಾಣಪತ್ರ ಅರ್ಹತೆ ಅಥವಾ ಕೇರಳ ರಾಜ್ಯ ದಾದಿಯರು ಮತ್ತು ಮಿಡ್‍ವೈವ್ಸ್ ಕೌನ್ಸಿಲ್ ಮತ್ತು ಕೇರಳ ರಾಜ್ಯ ನರ್ಸ್ ಮತ್ತು ಮಿಡ್‍ವೈವ್ಸ್ ಕೌನ್ಸಿಲ್‍ನಿಂದ ನೀಡಲಾದ ಆರೋಗ್ಯ ಕಾರ್ಯಕರ್ತರ ತರಬೇತಿ ಪ್ರಮಾಣಪತ್ರ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಹಿಂದಿನ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳ ಸಹಿತ ನವೆಂಬರ್ 12 ರಂದು ಬೆಳಗ್ಗೆ 10ಕ್ಕೆ ಪೆರಿಂಗೋಂನಲ್ಲಿ ಕಾರ್ಯಾಚರಿಸುತ್ತಿರುವ ಕರಿಂದಳಂ ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಪರಿಶಿಷ್ಟ ವರ್ಗ ಉದ್ಯೋಗಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ನಿಗದಿತ ವಿದ್ಯಾರ್ಹತೆಯ ಅನುಪಸ್ಥಿತಿಯಲ್ಲಿ ಬಿ.ಎಸ್ಸಿ ನಸಿರ್ಂಗ್ ಪದವಿಯನ್ನೂ ಸಹ ಪರಿಗಣಿಸಲಾಗುತ್ತದೆ. ನೇಮಕಾತಿ ವಸತಿ ಸ್ವರೂಪದಲ್ಲಿರುವುದರಿಂದ, ಆಯ್ಕೆಗೊಳ್ಳುವ ಅಭ್ಯರ್ಥಿಗಳು ಸಂಸ್ಥೆಯಲ್ಲಿಯೇ ವಾಸ್ತವ್ಯಹೂಡಿ ಕೆಲಸ ಮಾಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 13000 ರೂ. ಗೌರವಧನ ನೀಡಲಾಗುವುದು. ವಯಸ್ಸಿನ ಮಿತಿ 18-40 ಆಗಿರಲಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (8848554706)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.