HEALTH TIPS

ಇಸ್ರೇಲ್‌ ನಾಯಕರಿಗೆ ಬಂಧನದ ವಾರಂಟ್ ಬದಲು ಮರಣದಂಡನೆ ವಿಧಿಸಿ: ಇರಾನ್‌ ನಾಯಕ ಖಮೇನಿ

ದುಬೈ: ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್‌ಗಳನ್ನು ಹೊರಡಿಸುವ ಬದಲು ಮರಣದಂಡನೆ ವಿಧಿಸಬೇಕು ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತ್‌ ಉಲ್ಲಾ ಅಲಿ ಖಮೇನಿ ಹೇಳಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಹಾಗೂ ಹಮಾಸ್‌ ಮುಖ್ಯಸ್ಥ ಮೊಹಮ್ಮದ್‌ ಡೀಫ್‌ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಈಚೆಗೆ ಬಂಧನದ ವಾರಂಟ್‌ ಜಾರಿಗೊಳಿಸಿತ್ತು.

ಈ ಕುರಿತು ಖಮೇನಿ ಪ್ರತಿಕ್ರಿಯಿಸಿದ್ದಾರೆ.

ಐಸಿಸಿಯ ಈ ಕ್ರಮವು ನೆತನ್ಯಾಹು ಅವರ ಸಂಚಾರಕ್ಕೆ ನಿರ್ಬಂಧ ವಿಧಿಸುತ್ತದೆ. ನ್ಯಾಯಾಲಯದ 124 ಸದಸ್ಯ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಬಹುದಾಗಿದೆ.

ಮಾನವೀಯತೆಯ ವಿರುದ್ಧದ ಅಪರಾಧ ಮತ್ತು 2023ರ ಅಕ್ಟೋಬರ್‌ 8ರಿಂದ ಅವರು ನಡೆಸಿರುವ ಯುದ್ಧಾಪರಾಧಗಳಿಗಾಗಿ ನೆತನ್ಯಾಹು ಮತ್ತು ಗ್ಯಾಲಂಟ್‌ ಅವರನ್ನು ಬಂಧಿಸಲು ವಾರಂಟ್‌ ಜಾರಿಗೊಳಿಸಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿತ್ತು. ಡೀಫ್‌ ವಿರುದ್ಧವೂ ಐಸಿಸಿ ವಾರಂಟ್‌ ಜಾರಿ ಮಾಡಿತ್ತು.

ದಕ್ಷಿಣ ಗಾಜಾದಲ್ಲಿ ಜುಲೈನಲ್ಲಿ ತಾನು ನಡೆಸಿದ ವೈಮಾನಿಕ ದಾಳಿಯಲ್ಲಿ ಡೀಫ್‌ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಆಗಸ್ಟ್‌ನಲ್ಲಿ ಹೇಳಿತ್ತು. ಆದರೆ ಹಮಾಸ್‌ ಅದನ್ನು ನಿರಾಕರಿಸಿತ್ತು.

ಬೆಂಜಮಿನ್‌ ಖಂಡನೆ: ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಹೊರಡಿಸಿರುವ ಬಂಧನದ ವಾರಂಟ್‌ ಅನ್ನು ಖಂಡಿಸಿರುವ ಬೆಂಜಮಿನ್‌ ನೆತನ್ಯಾಹು ಅವರು, 'ಈ ಅಸಂಬದ್ಧ ಮತ್ತು ಸುಳ್ಳು ಕ್ರಮಗಳನ್ನು ಇಸ್ರೇಲ್‌ ತಿರಸ್ಕರಿಸುತ್ತದೆ' ಎಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries