ಬದಿಯಡ್ಕ: ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ. ಬದಿಯಡ್ಕ ವಳಮಲೆ ನಿವಾಸಿ, ಕೇರಳ ಕಾಂಗ್ರೆಸ್ ಮಾಣಿ ಗ್ರೂಪ್ ಮುಖಂಡ ಜೀವನ್ ಥಾಮಸ್ ಅವರ ಪತ್ನಿ ಬಿನಿಲಾ (34) ಮೃತಪಟ್ಟವರು. ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರು ಕಾಞಂಗಾಡ್ ಎಣ್ಣಪಾರ ಮುಂಡಕ್ಕಲ್ ನಿವಾಸಿ ಬೇಬಿ ಮತ್ತು ಗ್ರೇಸಿ ದಂಪತಿ ಪುತ್ರಿ. ಇವರು ಪತಿ, ಪುತ್ರನನ್ನು ಅಗಲಿದ್ದಾರೆ.