HEALTH TIPS

ಉದ್ಯೋಗಕ್ಕಾಗಿ ನೀಡಿದ ಹಣ ಕಳೆದುಕೊಂಡ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ

ಬದಿಯಡ್ಕ: ಉದ್ಯೋಗ ಭರವಸೆ ನೀಡಿ ತನ್ನ ಪುತ್ರಿಯಿಂದ 12.70ಲಕ್ಷ ರೂ. ಪಡೆದು ವಂಚಿಸಿರುವುದರಿಂದ ಖಿನ್ನತೆಗೊಳಗಾದ ಮಹಿಳೆ ಮನೆ ಸನಿಹದ ಶೆಡ್ಡಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷನ್ ಎಂಬವರ ಪತ್ನಿ ಸರೋಜಿನಿ(50)ಸಾವಿಗೀಡಾದ ಮಹಿಳೆ.

ಶುಕ್ರವಾರ ಬೆಳಗ್ಗೆ ಹಾಲು ಡಿಪೋಗೆ ಕೊಂಡುಹೋದ ಪತಿ ಅರವಿಂದಾಕ್ಷನ್ ವಾಪಸಾದಾಗ ಸರೋಜಿನಿ ನೇಣಿಗೆ ಶರಣಾಗಿದ್ದರು.

ಅರವಿಂದಾಕ್ಷನ್-ಸರೋಜಿನಿ ದಂಪತಿ ಪುತ್ರಿ ಅಮೃತಾ ಅವರಿಂದ ಡಿವೈಎಫ್‍ಐ ಮಾಜಿ ನೇತಾರೆ ಸಚಿತಾ ರೈ, ಸಿಪಿಸಿಆರ್‍ಐನಲ್ಲಿ ಉದ್ಯೋಗ ನೀಡುವ ಭರವಸೆನೀಡಿ 12.70ಲಕ್ಷ ರೂ.  ಪಡೆದು ವಂಚಿಸಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪುತ್ರಿಗೆ ಕೆಲಸ ಒದಗಿಸಿಕೊಡುವ ಭರವಸೆಯೊಂದಿಗೆ ನೀಡಿದ ಹಣ ವಾಪಸಾಗದ ಹಿನ್ನೆಲೆಯಲ್ಲಿ ಸರೋಜಿನಿ ಖಿನ್ನತೆಗೊಳಗಾಗಿದ್ದರೆನ್ನಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries