ಚಳಿಗಾಲ ಆರಂಭವಾಯಿತೆಂದರೆ ಒಂದಿಲ್ಲೊಂದು ಚರ್ಮ ಸಂಬಂಧಿ ಸಮಸ್ಯೆಗಳು ಬರಲು ಆಗಮಿಸುತ್ತದೆ. ಅದರಲ್ಲೂ ತೇವಾಂಶ ಕಡಿಮೆಯಾಗುವುದರಿಂದ ಚರ್ಮ ಒಡೆಯುವುದು, ಒರಟಾಗುವುದು ಹೆಚ್ಚಾಗುತ್ತದೆ. ಇನ್ನು ಹೆಚ್ಚಾಗಿ ಹಿಮ್ಮಡಿ ಒಡೆಯುವುದು ಚಳಿಗಾಲದಲ್ಲಿ ಬಹುತೇಕರಿಗೆ ಕಾಡುವಂತಹ ಸಮಸ್ಯೆಯಾಗಿರುತ್ತದೆ. ವರ್ಷವೆಲ್ಲಾ ಹಿಮ್ಮಡಿ ಒಡೆಯುವುದಕ್ಕೂ ಚಳಿಗಾಲದಲ್ಲಿ ಉಂಟಾಗುವ ನೋವಿಗೂ ಬಹಳ ವ್ಯತ್ಯಾಸವಿದೆ. ಚಳಿಗಾಲದಲ್ಲಿ ಹಿಮ್ಮಡಿ ಒಡೆದಾಗ ರಾತ್ರಿ ಪೂರ್ತಿ ಉರಿ ಉಂಟಾಗುತ್ತದೆ. ಕಾಲನ್ನು ನೆಲಕ್ಕೆ ಊರಲೂ ಆಗದಷ್ಟು ಸಹನೀಯ ನೋವು ಕಾಣಿಸುತ್ತದೆ.
ಆದ್ರೆ ಈ ರೀತಿ ಹಿಮ್ಮಡಿ ಒಡೆಯುವುದಕ್ಕೆ ಕೇವಲ ಚಳಿಗಾಲ ಮಾತ್ರ ಕಾರಣವಾಗಿರುವುದಿಲ್ಲ, ಬದಲಿಗೆ ನಮ್ಮ ಜೀವನಶೈಲಿ, ಆಹಾರ ಕೂಡ ಒಂದು ಕಾರಣವಾಗಿರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ನೀಡಬೇಕು. ಇಲ್ಲದೆ ಇದ್ದರೆ ನಡೆದಾಡಲು ಕಷ್ಟವಾಗುವುದು ಮತ್ತು ಅದರಿಂದ ಸೋಂಕು ಕಾಣಿಸಿಕೊಳ್ಳುವುದು. ಸಣ್ಣದಾಗಿ ಕಾಣಿಸಿಕೊಂಡ ಬಿರುಕು ಮುಂದೆ ದೊಡ್ಡದಾಗಿತ್ತಾ ಸಾಗಿ ತಡೆಯಲಾಗದಂತಹ ನೋವು ತಂದು ಬಿಡುತ್ತದೆ.ಈ ಎಲ್ಲಾ ವಸ್ತು ಕರಗುವಂತೆ ಕುದಿಸಿಕೊಳ್ಳಿ. ಅನಂತರ ಒಲೆ ಆಫ್ ಮಾಡಿಕೊಳ್ಳಿ. ಈ ರಸವನ್ನು ಯಾವುದಾದರು ಗಾಜು ಅಥವಾ ಸ್ಟೀಲ್ ಬಾಕ್ಸ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಇದನ್ನು ಫ್ರಿಡ್ಜ್‌ನಲ್ಲಿಟ್ಟರೆ ಸ್ವಲ್ಪ ಗಟ್ಟಿಯಾಗುತ್ತದೆ. ಇದನ್ನು ಹಿಮ್ಮಡಿಗೆ ಹಚ್ಚಬಹುದು. ಮೊದಲು ಕಾಲನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಶುದ್ಧ ಬಟ್ಟೆಯಲ್ಲಿ ತೊಳೆದು ಬಳಿಕ ಹಿಮ್ಮಡಿಗೆ ಹಚ್ಚಿಕೊಳ್ಳಬೇಕು. ಹಿಮ್ಮಡಿಗೆ ಹಚ್ಚಿದ ಬಳಿಕ ಒಂದು ಪ್ಲಾಸ್ಇಕ್
ಇದನ್ನು ಸುಮಾರು 1 ವಾರಗಳ ಕಾಲ ನಿರಂತರವಾಗಿ ಮಾಡಿ ನೋಡಿ. ಖಂಡಿತ ಹಿಮ್ಮಡಿ ಒಡೆತ ನಿವಾರಣೆಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ಪರಿಹಾರ ಮಾಡಿ ನೋಡಿ.
ಕ್ಯಾಂಡಲ್ ಪ್ಯಾಕ್
ದೀಪ ಹತ್ತಿಸಲು ಬಳಸುವ ಸಾಮಾನ್ಯ ಕ್ಯಾಂಡಲ್ ತೆಗೆದುಕೊಡು ಅದನ್ನು ಒಂದು ತಟ್ಟೆಗೆ ತುರಿದುಕೊಳ್ಳಿ. ತುರಿಯಲು ಆಗದೆ ಇದ್ದರೆ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಾಗೆ ಈ ಪ್ಲೇಟ್‌ಗೆ ಸ್ವಲ್ಪ ಅಲೂವೆರಾ ಜೆಲ್ ಹಾಕಿಕೊಳ್ಳಬೇಕು. 2ರಿಂದ 3 ಸ್ಪೂನ್ ಹಾಕಿದರೆ ಸಾಕು. ಬಳಿಕ ಇದಕ್ಕೆ ಕೊಬ್ಬರಿ ಎಣ್ಣೆ ಹಾಕಿಕೊಳ್ಳಿ. 3 ರಿಂದ 4 ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿಕೊಳ್ಳಿ. ಈಗ ಈ ಪಾತ್ರೆ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ.
ಈ ಎಲ್ಲಾ ವಸ್ತು ಕರಗುವಂತೆ ಕುದಿಸಿಕೊಳ್ಳಿ. ಅನಂತರ ಒಲೆ ಆಫ್ ಮಾಡಿಕೊಳ್ಳಿ. ಈ ರಸವನ್ನು ಯಾವುದಾದರು ಗಾಜು ಅಥವಾ ಸ್ಟೀಲ್ ಬಾಕ್ಸ್‌ಗೆ ಹಾಕಿಟ್ಟುಕೊಳ್ಳಿ. ಹಾಗೆ ಇದನ್ನು ಫ್ರಿಡ್ಜ್‌ನಲ್ಲಿಟ್ಟರೆ ಸ್ವಲ್ಪ ಗಟ್ಟಿಯಾಗುತ್ತದೆ. ಇದನ್ನು ಹಿಮ್ಮಡಿಗೆ ಹಚ್ಚಬಹುದು. ಮೊದಲು ಕಾಲನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಶುದ್ಧ ಬಟ್ಟೆಯಲ್ಲಿ ತೊಳೆದು ಬಳಿಕ ಹಿಮ್ಮಡಿಗೆ ಹಚ್ಚಿಕೊಳ್ಳಬೇಕು. ಹಿಮ್ಮಡಿಗೆ ಹಚ್ಚಿದ ಬಳಿಕ ಒಂದು ಪ್ಲಾಸ್ಇಕ್
ಇದನ್ನು ಸುಮಾರು 1 ವಾರಗಳ ಕಾಲ ನಿರಂತರವಾಗಿ ಮಾಡಿ ನೋಡಿ. ಖಂಡಿತ ಹಿಮ್ಮಡಿ ಒಡೆತ ನಿವಾರಣೆಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ಪರಿಹಾರ ಮಾಡಿ ನೋಡಿ.
ಹರಳೆಣ್ಣೆ ಪ್ಯಾಕ್
ಹರಳೆಣ್ಣೆಯಲ್ಲಿ ಅತ್ಯುತ್ತಮ ಆರೋಗ್ಯಕರ ಅಂಶಗಳಿವೆ. ಹೀಗಾಗಿ ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲವು ಸಮೃದ್ಧವಾಗಿದೆ ಮತ್ತು ಇದರಿಂದ ಅದು ಚರ್ಮಕ್ಕೆ ತೇವಾಂಶ ನೀಡುವುದು. ಹರಳೆಣ್ಣೆಯು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಹಿಮ್ಮಡಿ ಒಡೆದಿರುವುದಕ್ಕೆ ಬಳಸಬಹುದು. ಒಡೆದ ಹಿಮ್ಮಡಿಗೆ ಹರಳೆಣ್ಣೆ ಹಚ್ಚಿಕೊಂಡು ಮಲಗಬೇಕು. ಹರಳೆಣ್ಣೆ ಹಚ್ಚಿ ಬಳಿಕ ಕಾಟನ್ ಬಟ್ಟೆ ಕಟ್ಟಿಕೊಂಡು ಇಲ್ಲವೆ ಸಾಕ್ಸ್ ಹಾಕಿಕೊಂಡು ಮಲಗಬೇಕು. ಇದರಿಂದ ಒಡೆದ ಹಿಮ್ಮಡಿ ಸಮಸ್ಯೆ ನಿವಾರಣೆಯಾಗುತ್ತೆ.
ಬೇವಿನ ಎಲೆಗಳು
ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಇದನ್ನು ನೀವು ಬೆಳಗ್ಗೆಯೂ ತೊಳೆಯಬಹುದು ಇಲ್ಲವೆ ರಾತ್ರಿಯೇ ತೊಳೆದುಕೊಳ್ಳಬಹುದು. ಇದು ಕೂಡ ಒಂದು ಸರಳವಾದ ಮಾರ್ಗವಾಗಿದೆ.