ಮಧೂರು: ಕೇಂದ್ರ ಸರ್ಕಾರದ ಆಧುನಿಕ ನೂತನ ಯೋಜನೆಯ ಪ್ರಕಾರ ಬ್ಲಾಕ್ ಮಟ್ಟದಲ್ಲಿ ರೈತ ಉತ್ಪಾದಕ ಸಂಘ (ಎಫ್ಪಿಒ)ದ ರೂಪೀಕರಣ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಬ್ಲಾೀಕ್ ಮಟ್ಟದಲ್ಲಿ ಸಂಘವನ್ನು ರೂಪಿಸುವ ಸಲುವಾಗಿ ಮಧೂರು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸ್ಥಳೀಯ ರೈತರ ಸಭೆ ನಡೆಸಲಾಯಿತು.
ಮಧೂರು ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಭಾಶಂಕರ ಅಧ್ಯಕ್ಷತೆ ವಹಿಸಿದ್ದರು. ರೈತ ಉತ್ಪಾದಕ ಸಂಘ (ಎಫ್ಪಿಒ)ದ ಕಾಸರಗೋಡು ಬ್ಲಾಕ್ ಸಂಚಾಲಕ ಕಣ್ಣನ್ ಯೋಜನೆಯ ಮಾಹಿತಿ ನೀಡಿದರು. ಮಧೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಬ್ಲಾಕ್ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕ ಸರ್ವೇಶಕುಮಾರ್ ಭಟ್ ವಂದಿಸಿದರು.