HEALTH TIPS

ಎಡನೀರು ಶ್ರೀಗಳ ವಾಹನಕ್ಕೆ ಆಕ್ರಮಿಸಿದವರನ್ನು ಬಂಧಿಸಲು ಬಿಜೆಪಿ ಆಗ್ರಹ

ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಸಂಚರಿಸುತ್ತುದ್ದ ವಾಹನಕ್ಕೆ ಬೋವಿಕ್ಕಾನ ಸಮೀಪ ಆಕ್ರಮಣ ನಡೆಸಿದ ಹೀನ ಕೃತ್ಯವನ್ನು ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯು ತೀವ್ರವಾಗಿ ಖಂಡಿಸಿದೆ. ಈ ನಿಟ್ಟಿನಲ್ಲಿ ಸ್ವತಃ ಪೊಲೀಸರೇ ಕೇಸು ದಾಖಲಿಸಿ ತಪ್ಪತಸ್ಥರನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಂತಹ ಹೀನ ಕೃತ್ಯಗಳು ನಾಡಿನ ನೆಮ್ಮದಿಯನ್ನು ಹಾಳುಗೆಡಹುವಲ್ಲಿ ಕಾರಣವಾಗುತ್ತಿದೆ. ಆದುದರಿಂದ ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಜಾಗರೂಕರಾಗಬೇಕಾಗಿರುವುದು ಪೊಲೀಸರ ಕರ್ತವ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮಕೈಗೊಳ್ಳಲು ಪೊಲೀಸರು ಮುಂದಾಗದಿದ್ದಲ್ಲಿ ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಊರ ಭಕ್ತ ಜನರನ್ನು ಸೇರಿಸಿಕೊಂಡು ಹಾಗೂ ಸಂಘ ಪರಿವಾರದ ನೇತೃತ್ವದಲ್ಲಿ ಪೆÇಲೀಸ್ ಠಾಣೆಗೆ ಮಾರ್ಚ್ ನಡೆಸಲಾಗುವುದು ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries