HEALTH TIPS

ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾಗಿ ಡಾ.ಟಿ ತ್ಯಾಗರಾಜು ಮೈಸೂರು ಆಯ್ಕೆ

 ಕಾಸರಗೋಡು :ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ-ಕನ್ನಡ ಭವನ ಪ್ರಕಾಶನ. ಗಡಿನಾಡು ಕಾಸರಗೋಡಿನ ಹೆಮ್ಮೆಯ ಕನ್ನಡ ಪರ, ಸಾಹಿತ್ತಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ. 25 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂಸ್ಥೆ ವಿಶಿಷ್ಟ ಕಾರ್ಯಕ್ರಮ ಗಳ ಮೂಲಕ, ಸುಮಾರು 20,000ಪುಸ್ತಕಗಳನ್ನು ವ್ಯವಸ್ಥಿತ ರೀತಿಯಲ್ಲಿ ಹೊಂದಿಸಿ ಕನ್ನಡಿಗರೀಗೆ ಒದಗಿಸುವ ಗ್ರಂಥಾಲಯ, ಹಾಗೂ ಸಾರ್ವಜನಿಕ ವಾಚನಾಲಯ ಕಾರ್ಯ ಪ್ರವ್ರಿತ್ತಿಯಲ್ಲಿದೆ. ಸಂಸ್ಥೆಯು, ರಾಜ್ಯ, ಅಂತರ್ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳನ್ನು, ಕನ್ನಡ ನುಡಿ, ಸಾಹಿತ್ಯ, ಪ್ರತಿಭಾವಂತ ಸಾಧಕರು, ಹಿರಿಯ ಕನ್ನಡ ಚೇತನಗಳು, ಹಿರಿಯ ಸಮಾಜಸೇವಾ ಚೇತನಗಳು, ಶ್ರೇಷ್ಠ ಕವಿಗಳು, ಯುವ ಪ್ರತಿಭೆಗಳಿಗೆ ನೀಡಿ, ಪ್ರೋತ್ಸಾಹಿಸುತ್ತಾ ಬರುತ್ತಿದೆ. ಇದೀಗ ಕೇರಳ ರಾಜ್ಯದಿಂದ ಹೊರಗೆ ಕರ್ನಾಟಕ ರಾಜ್ಯ ವ್ಯಾಪಾಕವಾಗಿ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ, ಕನ್ನಡ ಭವನದ ರೂವಾರಿಗಳಾದ ಶ್ರೀ ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ತಮ್ಮ ಕಾರ್ಯಕಾರೀ ಸಮಿತಿಯ ಒಪ್ಪಿಗೆ, ಸಮ್ಮತಿ ಪಡೆದು ತೀರ್ಮಾನಿಸಿದ್ದಾರೆ. 

ಕರ್ನಾಟಕ, ಹೊರನಾಡು, ಗಡಿನಾಡುಗಳು ಸೇರಿ ವಿದೇಶ ರಾಜ್ಯಗಳಲ್ಲಿ ತಮ್ಮ ಸಂಸ್ಥೆಯ ಸಂಚಾಲಕರನ್ನು ಆಯ್ದು ವಿಸ್ತ್ರಿತ ರೀತಿಯಲ್ಲಿ ಕನ್ನಡ ಕಟ್ಟುವ, ಕನ್ನಡ ಕಟ್ಟಾಳುಗಳನ್ನು, ಜೋಡಿಸುವ, ಕನ್ನಡ ಪರ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಗಡಿನಾಡು ಕಾಸರಗೋಡಿಗೆ ಆಹ್ವಾನಿಸಿ ಕನ್ನಡ ಕಾರ್ಯಕ್ರಮ ಗಳನ್ನು ಆಯೋಜಿಸಿ ಪರಸ್ಪರ ಕಲೆ, ಸಂಸ್ಕೃತಿ, ಆಶಯ ವಿನಿಮಯ, ಗೌರವಿಸುವ, ಸಹಚಿಂತನ, ಪರಸ್ಪರ ಸಹಕಾರ, ಯೋಜನೆ, ಆಯೋಜನೆ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ, ಪರಸ್ಪರ ಸಹಕಾರ ತತ್ವದಡಿ ವಿಸ್ತಾರವಾದ ಕನ್ನಡಪರ ಚಿಂತನ, ಆವಿμÁ್ಕರ ಫಲಪ್ರದವಾಗಿ ಕಾರ್ಯರೂಪಕ್ಕೆ ತರುವ ಯೋಜನೆ. ಈ ಮಹತ್ತರ ಕಾರ್ಯಕ್ಕೆ ಮೈಸೂರಿನ ಪ್ರಭಾವಿ ಕನ್ನಡ ಕವಿ, ಸಾಹಿತಿ, ಸಮಾಜಸೇವಾ ಮುಂದಾಳು ಡಾ ತ್ಯಾಗರಾಜ್ ಮೈಸೂರು ಇವರನ್ನು ಕರ್ನಾಟಕ ರಾಜ್ಯ ಸಂಚಾಲಕರನ್ನಾಗಿ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಆಯ್ಕೆ ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries