ಕಾಸರಗೋಡು: ಆಸ್ತಿ ವಿವಾದದ ಹೆಸರಲ್ಲಿ ಉಂಟಾದ ಜಗಳದಲ್ಲಿ ತಮ್ಮ ಅಣ್ಣನನ್ನು ಇರಿದು ಬರ್ಭರವಾಗಿ ಕೊಲೆಗೈದ ಭೀಕರ ಘಟನೆ ನಡೆದಿದೆ. ಇದೇ ವೇಳೆ ಜಗಳ ತಡೆಯಲು ಬಂದ ಇಬ್ಬರು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾರೆ.
ಚೆಮ್ನಾಡು ಮಾವಿಲರೋಡ್ ತೆರವಳಪ್ಪಿಲ್ ಎ. ಚಂದ್ರನ್ ನಾಯರ್(52) ಕೊಲೆಗೈಯ್ಯಲ್ಪಟ್ಟ ವ್ಯಕ್ತಿ. ಕೊಲೆಯನ್ನು ತಡೆಯಲು ಬಂದ ಪೆರವಳಪ್ಪಿಲ್‍ನ ಮಣಿಕಂಠನ್ (48) ಮತ್ತು ಗೋಪಿನಾಥನ್ (48) ಎಂಬವರು ಇರಿತಕ್ಕೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ 8 ರ ವೇಳೆ ಇಡೀ ಊರನ್ನೇ ನಡುಗಿಸಿದ ಈ ಕೊಲೆ ಕೃತ್ಯ ನಡೆದಿದೆ. ಕೂಲಿ ಕಾರ್ಮಿಕನಾಗಿರುವ ಚಂದ್ರನ್ ಕೆಲಸ Àುುಗಿಸಿ ರಾತ್ರಿ ಮನೆಗೆ ಬಂದಿದ್ದರು. ಈ ವೇಳೆ ಆಸ್ತಿ ಹೆಸರಲ್ಲಿ ಅವರು ತನ್ನ ತಮ್ಮ ಎ.ಗಂಗಾಧರನ್ ನಾಯರ್(48)ರ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಗಂಗಾಧರನ್ ಚಾಕುವಿನಿಂದ ಚಂದ್ರನ್ ಅವರ ಎದೆಗೆ ಇರಿದರೆಂದೂ ಪೋಲೀಸರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡ ಚಂದ್ರನ್ ಅವರನ್ನು ಆಸ್ಪತ್ತೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಜಗಳ ತಡೆಯಲು ಹೋದ ಮಣಿಕಂಠನ್ ಮತ್ತು ಗೋಪಿನಾಥರಿಗೂ ಗಂಭೀರ ಗಾಯಗಳಾದವು.. ಬಳಿಕ ನೆರೆಮನೆಯವರು ಸೇರಿ ಗಂಗಾಧರನ್‍ನನ್ನು ಸೆರೆಹಿಡಿದು ಪೆÇಲೀಸರ ಕೈಗೆ ಒಪ್ಪಿಸಿದ್ದಾರೆ. ಮೇಲ್ಪರಂಬ ಪೆÇಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಚಂದ್ರನ್‍ರ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.
ಅವಿವಾಹಿತನಾದ ಆರೋಪಿ ಗಂಗಾಧರನ್ ಕೆಲವು ಸಮಯದಿಂದ ಊರಿನಲ್ಲಿ ಇದ್ದಿರಲಿಲ್ಲ. ಸೋಮವಾರವಷ್ಟೇ ಆತ ಊರಿಗೆ ಹಿಂತಿರುಗಿದ್ದನು. ಆಸ್ತಿ ಹೆಸರಲ್ಲಿ ಅಣ್ಣತಮ್ಮಂದಿರ ನಡುವೆ ಇತ್ತೀಚೆಗಿನಿಂದ ಪದೇ ಪದೇ ಜಗಳ ಉಂಟಾಗುತ್ತಿತ್ತೆಂದೂ ನೆರೆಮನೆಯವರು ಹೇಳುತ್ತಿದ್ದಾರೆ. ಆ ಜಗಳ ನಿನ್ನೆ ರಾತ್ರಿ ಚಂದ್ರನ್ ಕೊಲೆಗೆ ದಾರಿಮಾಡಿಕೊಟ್ಟಿತ್ತೆ0ದು ನೆರೆಮನೆಯವರು ತಿಳಿಸಿದ್ದಾರೆ.