ಲಖನೌ: ಮಹಿಳೆಯರ ಕೂದಲನ್ನು ಪುರುಷರು ಕತ್ತರಿಸಬಾರದು ಹಾಗೂ ಅವರು ಮಹಿಳೆಯರ ಬಟ್ಟೆಗಳನ್ನೂ ಹೊಲಿಯಬಾರದು ಎಂಬ ಪ್ರಸ್ತಾವನೆಯೊಂದನ್ನು ಉತ್ತರ ಪ್ರದೇಶದ ಮಹಿಳಾ ಆಯೋಗ ಮುಂದಿರಿಸಿದೆ. ಇಂಥ ಕ್ರಮಗಳಿಂದ ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರು ಮಾಡಬಹುದಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

'ಆಯೋಗದ ಮುಖ್ಯಸ್ಥೆ ಬಬಿತಾ ಚೌಹಾಣ್ ಅವರು ಅ.28ರಂದು ನಡೆದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿರಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಇದನ್ನು ಬೆಂಬಲಿಸಿದರು. ಈ ಕುರಿತು ಕಾನೂನು ಜಾರಿ ಮಾಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ' ಎಂದು ಆಯೋಗದ ಸದಸ್ಯೆ ಹಿಮಾನಿ ಅಗರ್ವಾಲ್ ಶುಕ್ರವಾರ ತಿಳಿಸಿದರು.
'ಮಹಿಳೆಯರ ಬಟ್ಟೆ ಹೊಲಿಯಲು ಅವರ ದೇಹದ ಅಳತೆಯನ್ನು ಮಹಿಳಾ ಟೈಲರ್‌ಗಳೇ ತೆಗೆದುಕೊಳ್ಳಬೇಕು. ಜೊತೆಗೆ ಅಂಗಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು. ಸಲೂನ್‌ಗಳಲ್ಲಿ, ಬ್ಯೂಟಿ ಪಾರ್ಲರ್‌ಗಳಲ್ಲಿ ಮಹಿಳೆಯರ ಕೂದಲನ್ನು ಮಹಿಳೆಯರೇ ಕತ್ತರಿಸಬೇಕು' ಎಂದರು.
'ಇಂಥ ವೃತ್ತಿಗಳಲ್ಲಿ ಗಂಡಸರು ಕೆಲಸ ಮಾಡುವುದರಿಂದಲೇ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿವೆ. ಕೆಲವು ಗಂಡಸರ ಉದ್ದೇಶಗಳು ಸರಿ ಇರುವುದಿಲ್ಲ. ಹಾಗಂತ ಎಲ್ಲ ಗಂಡಸರಿಗೂ ಕೆಟ್ಟ ಉದ್ದೇಶಗಳಿರುತ್ತವೆ ಎಂದಲ್ಲ' ಎಂದರು.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಲು ಕ್ಲಿಕ್ ಮಾಡಿ.
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.