ಕಾಸರಗೋಡು: ಕಣ್ಣೂರಿನ ವಸತಿಗೃಹವೊಂದರಲ್ಲಿ ಪತ್ನಿ, ಮಕ್ಕಳೊಂದಿಗೆ ತಂಗಿದ್ದ ಕಾಸರಗೋಡಿನ ವ್ಯಾಪಾರಿಯನ್ನು ಮೂರು ಮಂದಿಯ ತಂಡ ಅಪಹರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯ ಮೂವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ವಿದ್ಯಾನಗರ ಕಲ್ಲಕಟ್ಟ ನೈತಡ್ಕ ನಿವಾಸಿ ಸಮೀರ್, ಕಲ್ಲಕಟ್ಟ ಮರ್ದಂಬೈಲ್ ನಿವಾಸಿ ಅಬ್ದುಲ್ಲ ಹಾಗೂ ಅಂಗಡಿಮೊಗರು ಕಂಬಾರ್ ನಿವಾಸಿ ಸೈದಲಿ ಬಂಧಿತರು. ವಿದ್ಯಾನಗರ ಕಲ್ಲಕಟ್ಟ ಸನಿಹದ ಮರ್ದಂಬೈಲ್ ನಿವಾಸಿ, ಬಟ್ಟೆ ವ್ಯಾಪಾರಿ ಮಹಮ್ಮದ್ ಶಬೀರ್ ಎಂಬವರನ್ನು ಅಪಹರಿಸಲು ಯತ್ನಿಸಿ ತಂಡ ಬಂಧನಕ್ಕೊಳಗಾಗಿದೆ. ಮಹಮ್ಮದ್ ಶಬೀರ್ ವ್ಯಾಪಾರಕ್ಕಾಗಿ ಸಮೀರ್ನಿಂದ 20ಲಕ್ಷ ರೂ. ಸಆಲಪಡೆದುಕೊಮಡಿದ್ದು, ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಹಣವಾಪಾಸುಮಾಡಲಾಗದೆ, ಸಂದಿಗ್ಧತೆಗೊಳಗಾಗಿ ನಂತರ ಊರು ಬಿಟ್ಟು ಕಣ್ಣೂರಿನಲ್ಲಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ತಂಡ ಇವರನ್ನು ವಸತಿಗೃಹದಿಂದ ಉಪಾಯದಿಂದ ಹೊರಕ್ಕೆ ಕರೆದು ಕಾರಿನಲ್ಲಿ ಅಪಹರಿಸಲು ಯತ್ನಿಸಿದೆ. ಈ ಸಂದರ್ಭ ಮಹಮ್ಮದ್ ಶಬೀರ್ ಬೊಬ್ಬಿಡುತ್ತಿದ್ದಂತೆ ತಂಡ ಪರಾರಿಯಾಗಲೆತ್ನಿಸಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಿದೆ.