ಚಳಿಗಾಲದಲ್ಲಿ ಶೀತವಾದರೆ ಮೂಗು ಬಂದ್ ಆಗಿ ಮಕ್ಕಳು ಮಾತ್ರವಲ್ಲದೇ ದೊಡ್ಡವರು ಕೂಡ ಉಸಿರಾಡಲು ಚಡಪಡಿಸುತ್ತಾರೆ. ಹೀಗಾಗಿ ಶೀತದಿಂದ ಬಂದ್ ಆದ ಮೂಗಿನಲ್ಲಿ ಗಾಳಿಯಾಡುವಂತೆ ಮಾಡಿ ಆರಾಮ ನೀಡುವ ಕೆಲವು ಪರಿಣಾಮಕಾರಿ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳನ್ನು ಪ್ರಯತ್ನಿಸಿದರೆ ಮಕ್ಕಳಿಗೆ ಖಂಡಿತವಾಗಿಯೂ ಆರಾಮ ಸಿಗುತ್ತದೆ.
ಚಳಿಗಾಲ ಬಂತೆಂದರೆ ಮಕ್ಕಳಿಗೆ ಸೀನುವಿಕೆ, ಕೆಮ್ಮು ಸಾಮಾನ್ಯ. ಮೂಗು ಕಟ್ಟುವುದು ಕೂಡ ಜೊತೆಗಿರುತ್ತದೆ. ಮಕ್ಕಳಿಗೆ ಶೀತವಾದಾಗ ಪೋಷಕರಿಗೂ ಕಷ್ಟ. ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ. ಮತ್ತು ಯಾವಾಗಲೂ ಅಳುತ್ತಿರುತ್ತಾರೆ. ಔಷಧಿಗಳನ್ನು ಕೊಟ್ಟರೂ ಶೀತ ಬೇಗನೆ ವಾಸಿಯಾಗುವುದಿಲ್ಲ. ಆದರೆ ಕೆಲವು ಮನೆಮದ್ದುಗಳು ನಿಮ್ಮ ಮಗುವಿನ ಶೀತ ಮತ್ತು ಕೆಮ್ಮನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅವು ಯಾವುವು ಎಂದು ತಿಳಿದುಕೊಳ್ಳೋಣ. ಮಕ್ಕಳ ಮೂಗು ಸ್ವಚ್ಛಗೊಳಿಸಲು ಮತ್ತು ಅವರಿಗೆ ಆರಾಮ ನೀಡಲು ಸಹಾಯ ಮಾಡುವ ಪರಿಣಾಮಕಾರಿ ವಿಧಾನಗಳು ಇಲ್ಲಿವೆ. ಇವುಗಳನ್ನು ಪ್ರಯತ್ನಿಸಿದರೆ ಮಕ್ಕಳಿಗೆ ಖಂಡಿತವಾಗಿಯೂ ಆರಾಮ ಸಿಗುತ್ತದೆ.
1. ಹ್ಯೂಮಿಡಿಫೈಯರ್: ಮಕ್ಕಳಿಗೆ ಶೀತವಾದಾಗ ಮನೆಯಲ್ಲಿ ಹ್ಯೂಮಿಡಿಫೈಯರ್(ಕೋಣೆ ಅಥವಾ ಕಟ್ಟಡದ ಗಾಳಿಯಲ್ಲಿ ನೀರಿನ ಆವಿಯ ಪ್ರಮಾಣವನ್ನು ಹೆಚ್ಚಿಸುವ ಸಾಧನ,) ಇಡಬೇಕು. ಇದು ಗಾಳಿಗೆ ತೇವಾಂಶವನ್ನು ಸೇರಿಸುತ್ತದೆ. ಇದು ಮಕ್ಕಳು ಉಸಿರಾಡಲು ಸಹಾಯ ಮಾಡುತ್ತದೆ. ಗಾಳಿ ಒಣಗಿದ್ದಾಗ ಮೂಗಿನಲ್ಲಿ ಹೆಚ್ಚು ಕಿರಿಕಿರಿ ಉಂಟಾಗುತ್ತದೆ. ಮನೆಯಲ್ಲಿ ಹ್ಯೂಮಿಡಿಫೈಯರ್ ಇದ್ದರೆ ಆ ತೊಂದರೆ ಇರುವುದಿಲ್ಲ. ಮೂಗು ಮುಕ್ತವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
2. ಹೈಡ್ರೇಟೆಡ್ ಆಗಿರಿಸುವುದು… ಶೀತವಾದಾಗ ಮಕ್ಕಳ ದೇಹವನ್ನು ಹೈಡ್ರೇಟೆಡ್ ಆಗಿರಿಸಬೇಕು. ಇದಕ್ಕಾಗಿ ನಿಯಮಿತವಾಗಿ ನೀರು ಕುಡಿಸಬೇಕು. ಇದರಿಂದ ಶೀತದ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಗಂಟಲು ನೋವು ಕೂಡ ಇರುವುದಿಲ್ಲ.
3. ಸಲೈನ್ ನಾಸಲ್ ಡ್ರಾಪ್ಸ್ಪ್ರಯತ್ನಿಸಿ : ಸಲೈನ್ ಡ್ರಾಪ್ಸ್ ಅಥವಾ ಸ್ಪ್ರೇಗಳು ಶಿಶುವಿನ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಸೌಮ್ಯ ವಿಧಾನ. ಸಲೈನ್ ದ್ರಾವಣವು ಲೋಳೆಯನ್ನು ಸಡಿಲಗೊಳಿಸಲು ಮತ್ತು ತೆಳುಗೊಳಿಸಲು ಸಹಾಯ ಮಾಡುತ್ತದೆ, ಇದು ಹೆಚ್ಚು ಸುಲಭವಾಗಿ ಹೊರ ಹೋಗಲು ಅನುವು ಮಾಡಿಕೊಡುತ್ತದೆ. ತಕ್ಷಣದ ಪರಿಹಾರಕ್ಕಾಗಿ ಮೂಗಿನ ಹೊಳ್ಳೆಗಳಲ್ಲಿ ಕೆಲವು ಹನಿಗಳನ್ನು ಹಾಕಿ
4.ಆವಿ ಪಡೆಯುವುದು: ನಿಯಮಿತವಾಗಿ ಆವಿ ಪಡೆಯುವುದರಿಂದ ಮೂಗು ಸೋರುವುದು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಹಾಗೂ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
5.ತಲೆಯ ಕೆಳಗೆ ಎತ್ತರದ ದಿಂಬು ಇಡುವುದು… ಶೀತವಾದಾಗ ಮಕ್ಕಳ ಗಂಟಲಿನ ಹಿಂಭಾಗದಲ್ಲಿ ಲೋಳೆಯು ಸಂಗ್ರಹವಾಗುತ್ತದೆ. ಇದು ಶೀತ ಮತ್ತು ಕೆಮ್ಮನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಲಗುವಾಗ ತಲೆಯ ಕೆಳಗೆ ಹೆಚ್ಚು ಎತ್ತರದ ದಿಂಬು ಇಡಬೇಕು. ಆಗ ಅವರಿಗೆ ಆರಾಮ ಸಿಗುತ್ತದೆ. ಚೆನ್ನಾಗಿ ನಿದ್ದೆ ಮಾಡುತ್ತಾರೆ. ಅವರಿಗೆ ಬಿಸಿ ಪಾನೀಯಗಳನ್ನು ಕುಡಿಸಬೇಕು. ಇತರೆ ಮನೆಮದ್ದುಗಳು… ಜೇನುತುಪ್ಪವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಬೆರಳನ್ನು ಜೇನುತುಪ್ಪದಲ್ಲಿ ಅದ್ದಿ ನಿಮ್ಮ ಮಗುವಿಗೆ ದಿನಕ್ಕೆ ಎರಡು ಮೂರು ಬಾರಿ ನೆಕ್ಕಿಸಬೇಕು. ನಿಮ್ಮ ಮಗುವಿನ ವಯಸ್ಸು ಐದು ವರ್ಷಗಳಿಗಿಂತ ಹೆಚ್ಚಿದ್ದರೆ, ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ. ಓಮ ಮತ್ತು ತುಳಸಿ ಎಲೆಗಳನ್ನು ಕುದಿಸಿ, ಆ ನೀರನ್ನು ಕುಡಿಸುವುದರಿಂದ ಕೆಮ್ಮಿನಿಂದ ಪರಿಹಾರ ಸಿಗುತ್ತದೆ.
ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿಯೊಂದಿಗೆ ಬೆರೆಸಿ ಮಗುವಿನ ಎದೆ, ಬೆನ್ನು ಮತ್ತು ಕುತ್ತಿಗೆಗೆ ಮಸಾಜ್ ಮಾಡಬೇಕು. ಜೊತೆಗೆ ಮಗುವಿನ ಅಂಗೈ ಮತ್ತು ಪಾದಗಳಿಗೆ ಎಣ್ಣೆ ಹಚ್ಚಿದರೆ ಬೇಗನೆ ಪರಿಹಾರ ಸಿಗುತ್ತದೆ. ನಿಮ್ಮ ಮಗು ಸೀನುತ್ತಿದ್ದರೆ ಮತ್ತು ಕೆಮ್ಮುತ್ತಿದ್ದರೆ, ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ನಿಯಮಿತವಾಗಿ ನೀರು ಕುಡಿಯುವುದರಿಂದ ಶೀತದ ವಿರುದ್ಧ ಹೋರಾಡಲು, ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಸೋಂಕುಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಬಿಸಿ ಸೂಪ್ ಕುಡಿಸಿದರೂ ಪರಿಹಾರ ಸಿಗುತ್ತದೆ. ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಟೀ ಚಮಚ ಉಪ್ಪು ಹಾಕಿ ಕುಡಿಸಬೇಕು.