ಬದಿಯಡ್ಕ: ಹಿರಿಯ ಯಕ್ಷಗಾನ ಅರ್ಥದಾರಿ, ಗಮಕ ವ್ಯಾಖ್ಯಾನಕಾರ, ಸಾಹಿತ್ಯ ವಿಮರ್ಶಕ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಈ ಬಾರಿಯ ಪುವೆಂಪು 2024 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕುಂಬ್ಡಾಜೆಯ ಬೆಳ್ಳಿಗೆ ಮನೆತನದ ಹಿರಿಯವರಾದ ಬೆಳ್ಳಿಗೆ ನಾರಾಯಣ ಮಣಿಯಾಣಿಯವರು ಸಂಸ್ಕøತ ಭಾμÉ, ಭಾರತೀಯ ಪುರಾಣ, ಇತಿಹಾಸ, ಕಾವ್ಯಗಳ ಬಗೆ ಅಧ್ಯಯನ ಮಾಡಿದ್ದಲ್ಲದೇ ಧರ್ಮ ಸಂಸ್ಕೃತಿಯ ಬಗೆ, ಉತ್ತಮ ಸಾಹಿತ್ಯ ವಿಮರ್ಶಕರಾಗಿದ್ದಾರೆ.
ಕನ್ನಡ, ತುಳು, ಮಲೆಯಾಳ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದಲ್ಲದೇ ಜ್ಯೋತಿಷ್ಯದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಪರಂಪರಾಗತವಾಗಿ ಬಂದಿರುವ ಆರ್ಯುವೇದದ ಜ್ಞಾನ ಹಾಗೂ ಪ್ರಯೋಗವನ್ನು ಮೈಗೂಡಿಸಿದವರಾಗಿದ್ದಾರೆ.
ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ, ಮುಳ್ಳೇರಿಯ ಪ್ರೌಢ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾಗಿ ಕೆಲವು ಕ್ಷೇತ್ರಗಳ ಜೀರ್ಣೋದ್ಧಾರ ಬ್ರಹ್ಮಕಲಶ ಕಾರ್ಯಕ್ರಮಗಳಲ್ಲಿ ಕಾರ್ಯಪ್ರವೃತ್ತರಾಗಿ, ವಿವಿಧ ಕಲೋತ್ಸವಗಳ ವಿಧಿನಿರ್ಣಾಯಕರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈ ಬಾರಿಯ ಪುವೆಂಪು 2024 ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ನವೆಂಬರ್ 20ರಂದು ಬದಿಯಡ್ಕದ ವಳಮಲೆ ಇರಾ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತುಳು ರತ್ನ, ಬಹುಭಾμÁ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಿಂಚಿತ್ತಾಯ 88ನೇ ಹುಟ್ಟು ಹಬ್ಬ ಪುವೆಂಪು ನೆನಪು 2024 ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರು, ಹಿರಿಯ ಕವಿ, ಸಾಹಿತಿ ಪೆÇ್ರ.ವಿ.ಬಿ.ಅರ್ತಿಕಜೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಹಾಗೂ ಶಾಸಕ ಎನ್ ಎ ನೆಲ್ಲಿಕುನ್ನು ಇವರ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.