ಮಂಜೇಶ್ವರ : ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ.
ಇದೀಗ ಮಂಜೇಶ್ವರ ಉದ್ಯಾವರ ಸಮೀಪದ 10 ನೇ ಮೈಲಿನಲ್ಲಿ ವಾಸವಾಗಿರುವ ಪೆÇಡಿಯ ಅಕ್ಬರ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗ ನಗದು ದೋಚಿ ಪರಾರಿಯಾಗಿದ್ದಾರೆ.
ಪೆÇಡಿಯ ಅಕ್ಬರ್ ಹಾಗೂ ಕುಟುಂಬ ವಿಮಾನ ನಿಲ್ದಾಣಕ್ಕೆ ತೆರಳಿದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ಮಲಗುವ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ ಆರುವರೆ ಪವನ್ ಚಿನ್ನಾಭರಣ ಹಾಗೂ 35000 ನಗದನ್ನು ದೋಚಿರುವುದಾಗಿ ಪೆÇಲೀಸರಿಗೆ ದೂರು ನೀಡಲಾಗಿದೆ.
ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಸಮೀಪದ ಸಿ ಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕೇಂದ್ರೀಕರಿಸಿ ಪೆÇಲೀಸರು ತನಿಖೆ ನಡೆಸುತಿದ್ದಾರೆ.