ಕಾಸರಗೋಡು: ಕೂಡ್ಲು ಪಾರೆಕಟ್ಟ ನಿವಾಸಿ ದಿ.ರಾಮ ಪಾಟಾಳಿ ಅವರ ಪುತ್ರ ಉದಯ ಕುಮಾರ್(42)ಅವರ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಬುಧವರ ಸಂಜೆ ಮನೆಯಿಂದ ಹೊರ ತೆರಳಿದ್ದ ಇವರು ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುವ ಮಧ್ಯೆ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ತಕ್ಷನ ಅಗ್ನಿಶಾಮಕ ದಳ ನೆರವಿನಿಂದ ಮೇಲಕ್ಕೆತ್ತಲಾಗಿದ್ದು, ಅಷ್ಟರಲ್ಲಿ ಸಾವು ಸಂಭವಿಸಿತ್ತು. ಈ ಹಿಂದೆ ವಿದೇಶದಲ್ಲಿ ಕೆಲಸದಲ್ಲಿದ್ದ ಉದಯ ಕುಮಾರ್ ಅವರು, ಊರಿಗೆ ವಾಪಸಾದ ನಂತರ ಪೇಂಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದರು.