ಬದಿಯಡ್ಕ : ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ ಐಪಿಎಸ್ ಅವರು ಬದಿಯಡ್ಕ ಪೆÇಲೀಸ್ ಠಾಣಾ ವ್ಯಾಪ್ತಿಯ ಮುಳಿಪರಂಬ ನಗರ 11 ನೇ ವಾರ್ಡ್‍ಗೆ ಭೇಟಿ ನೀಡಿ ದೂರು ಪರಿಹಾರ ಅದಲತ್‍ನಲ್ಲಿ ಪಾಲ್ಗೊಂಡರು.
ಜಿಲ್ಲಾ ಪೊಲೀಸ್ ವರಿಷ್ಠರ ನಗರ ಭೇಟಿಯ ಅಂಗವಾಗಿ ಆಯೋಜಿಸಲಾಗಿದ್ದ ದೂರು ಪರಿಹಾರ ಅದಲತ್‍ನಲ್ಲಿ ಸ್ಥಳೀಯ ಜನರ ದೂರುಗಳನ್ನು ಆಲಿಸಿ, ಕೆಲವೊಂದು ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಅದಾಲತ್‍ನಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಅದಾಲತ್ ಶಿಲ್ಪಾ ಡಿ.ಐಪಿಎಸ್ ಉದ್ಘಾಟಿಸಿ, ಮಾತನಾಡಿ, ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿ ಇಂತಹ ಪಿಡುಗಗಳಿಂದ ದೂರವಿರುವಂತೆ ಸೂಚಿಸಿದರು. ಕಾಸರಗೋಡು ಸ್ಪೆಶ್ಯಲ್ ಮೊಬೈಲ್‍ಸ್ಕ್ವಾಡ್ ಡಿವೈಎಸ್ಪಿ ಪ್ರೇಮಸದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಯಿತಿ ಸದಸ್ಯೆ ಸುಬೈದಾ ಉಪಸ್ಥಿತರಿದ್ದರು. ಬದಿಯಡ್ಕ ಪೆÇಲೀಸ್ ಠಾಣೆ ಇನ್ಸ್ ಪೆಕ್ಟರ್ ಸುಧೀರ್ ಕೆ ಸ್ವಾಗತಿಸಿದರು. ಎಸ್ಸಿ ಪ್ರಮೋಟರ್ ರೋಹಿತ್ ವಂದಿಸಿದರು.