ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐಇಇಇ(ಇನ್‍ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್) ವಿದ್ಯಾರ್ಥಿಗಳ ಶಾಖೆ ಜಂಟಿಯಗಿ ಸಂಖ್ಯಾಶಾಸ್ತ್ರೀಯ ಪರೀಕ್ಷೆಯ ಕುರಿತಾದ ಕಲಿಕೆಗಾಗಿ ಎರಡು ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಜರುಗಿತು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಪಾಟ್ನಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪೆÇ್ರ.ಅರುಣ್ ಕುಮಾರ್ ಸಿನ್ಹಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ, ಡಾ. ಸೆಬಾಸ್ಟಿಯನ್ ಜಾರ್ಜ್, ಡಾ. ಸುನೀಲ್ ಕುಮಾರ್, ಡಾ. ಜೆರಿನ್ ಪಾಲ್ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ಜೆ.ಎಸ್. ಜಯಸುಧಾ, ಪೆÇ್ರ. ಆರ್. ರಾಜೇಶ್, ಡಾ. ಟಿ.ಎಂ. ತಸ್ಲೀಮಾ, ಡಾ. ಮನೋಹರ ನಾಯ್ಕ, ಡಾ. ಕುಮಾರ್, ಡಾ. ವಿ. ಆದಿತ್ಯ ಉಪಸ್ಥಿತರಿದ್ದರು. ವಿವಿಧ ದೇಶಗಳಿಂದ ಆಗಮಿಸಿದ ತಜ್ಞರು ಪ್ರಬಂಧ ಮಂಡಿಸಿದರು.