ಬದಿಯಡ್ಕ: ಭಗವಂತನಿಗೆ ಸಮರ್ಪಿಸುವ, ದೇವಾಲಯಗಳ ಅಭಿವೃದ್ದಿಗೆ ಬೆಂಬಲವಾಗಿರುವ ವ್ಯಕ್ತಿಗಳು ಸಮಾಜದ ಶಕ್ತಿಗಳಾಗಿದ್ದು, ಹೆಚ್ಚಿನ ಸೇವಾ ಮನೋಭಾವ ಭಗವತ್ಸಂಪ್ರೀತಿಗೆ ಕಾರಣವಾಗುತ್ತದೆ ಎಂದು ಇರುವೈಲು ಕೃಷ್ಣದಾಸ ತಂತ್ರಿ ತಿಳಿಸಿದರು.
ಎಡನೀರು ಸಮೀಪದ ಪಾಡಿ ಬೆಳ್ಳೂರು ಶ್ರೀಮಹಾವಿಷ್ಣು ಕ್ಷೇತ್ರದ ರಾಜಾಂಗಣಕ್ಕೆ ನೂತನವಾಗಿ ಅಳವಡಿಸಿದ ಶಿಲಾಹಾಸನ್ನು ಶುಕ್ರವಾರ ರಾತ್ರಿ ನಡೆದ ಕಾರ್ತಿಕ ದೀಪೋತ್ಸವದ ಸಂದರ್ಭ ಲೋೀಕಾರ್ಪಣೆ ಸಮಾರಂಭದಲ್ಲಿ ಅವರು ಪ್ರಾರ್ಥನೆಗೈದು ಮಾತನಾಡಿದರು.
ದಾನಿಗಳಾದ ಉದ್ಯಮಿ, ಧಾರ್ಮಿಕ ಮುಂದಾಳು ಬಿ.ಗೋಪಾಲಕೃಷ್ಣ ಪೈ ಬದಿಯಡ್ಕ ಈ ಸಂದರ್ಭ ಉಪಸ್ಥಿತರಿದ್ದು, ಸೇವಾ ರೂಪದ ಸಮರ್ಪಣೆ ಸಕಲರಿಗೂ ನೆಮ್ಮದಿ, ದೇವರ ಸಂಪ್ರೀತಿಗೆ ಕಾರಣವಾಗಲಿ ಎಂದರು.
ಎಡನೀರು ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ, ಪಾಡಿ ಬೆಳ್ಳೂರು ಕ್ಷೇತ್ರದ ಅಧ್ಯಕ್ಷ ಎಂ.ಜೆ.ಹರಿಪ್ರಸಾದ್ ಅರಸರು, ಕಾರ್ಯದರ್ಶಿ ವೇಣುಗೋಪಾಲ, ಖಜಾಂಜಿ ರವೀಂದ್ರನ್, ಪ್ರಮುಖರಾದ ಪ್ರೊ.ಎ.ಶ್ರೀನಾಥ್, ರಾಮಕೃಷ್ಣ ಎಡನೀರು, ಶಂಕರ ಆಳ್ವ, ಜಗನ್ನಾಥ ಶೆಟ್ಟಿ, ನ್ಯಾಯವಾದಿ.ನಾರಾಯಣ ನಾಯರ್, ಕುಂಞÂ್ಞ ನಾಯರ್, ಸದಾಶಿವ, ಗ್ರಾ.ಪಂ.ಸದಸ್ಯರಾದ ವೇಣುಗೋಪಾಲ, ಹರೀಶ್, ಕೊಡಿವಳಪ್ಪು ಕೃಷ್ಣನ್ ನಾಯರ್, ದೈವಪಾತ್ರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಉಪಸ್ಥಿತರಿದ್ದ ವಿದುಶಿಃ ಉಷಾ ಈಶ್ಚರ ಭಟ್ ಪ್ರಾರ್ಥನಾಗೀತೆ ಹಾಡಿದರು. ವಿದ್ವಾನ್.ಈಶ್ವರ ಭಟ್ ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀಕ್ಷೇತ್ರಕ್ಕೆ ಸಮರ್ಪಣೆಯಾದ ನೂತನ ಡೋಲನ್ನೂ ಸಮರ್ಪಿಸಲಾಯಿತು.
ಸಮಾರಂಭದ ಬಳಿಕ ಶ್ರೀದೇವರಿಗೆ ಕಾರ್ತಿಕ ದೀಪೋತ್ಸವ, ವಿಶೇಷ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಿತು.