ಬದಿಯಡ್ಕ : ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲದ ಆಶ್ರಯದಲ್ಲಿ ನಗುವಿನಂಗಳದಲ್ಲಿ ಚಿಣ್ಣರ ಚಿತ್ತಾರ ಎಂಬ ವಿನೂತನ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಖ್ಯಾತ ವ್ಯಂಗ್ಯಚಿತ್ರಗಾರ,ಸಾಹಿತಿ ವೆಂಕಟ್ ಭಟ್ ಅವರ ಸ್ವಗೃಹವಾದ ಎಡನೀರಿನ ನಗು ಎಂಬ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮವನ್ನು ಗಡಿನಾಡ ಯುವ ಸಾಧಕ ಪ್ರಶಸ್ತಿ ಪುರಸ್ಕøತ ಸ್ಕಂದ ಎ.ಎಸ್.ಕಾಟುಕುಕ್ಕೆ ಉದ್ಘಾಟಿಸಿದರು. ಕವಯತ್ರಿ ಗ್ರೀಷ್ಮಾ ಬಳ್ಳ ಸಭೆಯ ಅಧ್ಯಕ್ಷತೆವಹಿಸಿದ್ದರು. ಹಿರಿಯ ವ್ಯಂಗ್ಯಚಿತ್ರಕಾರ ಎಲ್ಲೆನ್ ರಾವ್, ವೆಂಕಟ್ ಭಟ್, ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ, ಪ್ರಗತಿ ವಿಶೇಷ ಶಾಲಾ ಪ್ರಾಂಶುಪಾಲ ಉದಯ ಕುಮಾರ್ ಎಂ, ಎಡನೀರು ಸ್ವಾಮೀಜಿಸ್ ಶಾಲೆಯ ಮುಖ್ಯೋಪಾಧ್ಯಾಯಿನಿಜ್ಯೋತಿಲಕ್ಷ್ಮಿ, ಚಂದ್ರಹಾಸ ಮಾಸ್ತರ್ ಅರೆಕ್ಕಾಡಿ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ನಾರಾಯಣ ಬಾರಡ್ಕ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಸುಂದರ ಬಾರಡ್ಕ, ಕವಯತ್ರಿ ನಿರ್ಮಲ ಶೇಷಪ್ಪ ಖಂಡಿಗೆ,ವನಜಾಕ್ಷಿ ಚಂಬ್ರಕಾನ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳ ಕವಿಗೋಷ್ಠಿಯಲ್ಲಿ ಅಂಜು ವಿನಯ್, ಸ್ಕಂದ, ಹರ್ಷಿತಾ, ಸುಸ್ಮಿತಾ, ಸ್ಮಿತಾ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಹಿತಿ ವೆಂಕಟ್ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ವರ್ಷಿಣಿ ಪ್ರಾರ್ಥನೆಗೈದರು. ದೀಕ್ಷಾ ಪಾಂಡಿಗಯ ಸ್ವಾಗತಿಸಿ, ಹರ್ಷಿತಾ ಪಿ.ನಿರೂಪಿಸಿದರು.