HEALTH TIPS

ಮಂಜು ವಾರಿಯರ್ ಮಾನನಷ್ಟ ದೂರು; ಶ್ರೀಕುಮಾರ್ ಮೆನನ್ ವಿರುದ್ಧದ ಪ್ರಕರಣ ರದ್ದು

ಎರ್ನಾಕುಳಂ: ಮಂಜು ವಾರಿಯರ್ ದೂರಿನ ಮೇರೆಗೆ ನಿರ್ದೇಶಕ ಶ್ರೀಕುಮಾರ್ ಮೆನನ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಅವಮಾನ ಮಾಡಲಾಗಿದೆ ಎಂದು ಮಂಜು ವಾರಿಯರ್ ದೂರು ದಾಖಲಿಸಿದ್ದರು. ಈ ದೂರಿನ ವಿರುದ್ಧ ಶ್ರೀಕುಮಾರ್ ಮೆನನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿದೆ. ಅರ್ಜಿಯಲ್ಲಿ ಮಂಜು ವಾರಿಯರ್ ಅವರ ಅಭಿಪ್ರಾಯ ಕೇಳಲಾಗಿತ್ತು, ಆದರೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಂಜು ವಾರಿಯರ್ 2019 ರಲ್ಲಿ ಶ್ರೀಕುಮಾರ್ ಮೆನನ್ ವಿರುದ್ಧ ದೂರು ದಾಖಲಿಸಿದ್ದರು. ಒಡಿಯನ್ ಚಿತ್ರದ ಬಿಡುಗಡೆಯ ನಂತರದ ವಿವಾದಗಳಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದಾರೆ ಎಂದು ದೂರಿದರು. ಸೈಬರ್ ದಾಳಿ ಹಿಂದೆ ಶ್ರೀಕುಮಾರ್ ಕೈವಾಡವಿದೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಮಂಜು ಡಿಜಿಪಿಗೆ ದೂರು ನೀಡಿದ್ದರು. ನಂತರ ತ್ರಿಶೂರ್ ಟೌನ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ದೂರಿನ ಬಗ್ಗೆ ಶ್ರೀಕುಮಾರ್ ಮೆನನ್ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದರು. . ಮಂಜು ಅವರಿಗೆ ಪರೋಪಕಾರದ ಸ್ಮೃತಿ ಇಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀಕುಮಾರ್ ಮೆನನ್ ಹೇಳಿಕೆ ನೀಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries