ಕಾಸರಗೋಡು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜಂಟಿಯಾಗಿ ಮಕ್ಕಳ ದಿನವನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಮಗವಾಗಿ ವಿಶೇಷ ರ್ಯಾಲಿ ಆಯೋಜಿಸಲಾಗಿತ್ತು. ಅಸಾಪ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುಮನ್ ಸಮಾರಂಭ ಉದ್ಘಾಟಿಸಿಸಿದರು. ವಿಶೇಷವಾಗಿ ಸಜ್ಜುಗೊಳಿಸಲಾದ ವಾಹನದಲ್ಲಿ ರಾಷ್ಟ್ರಪತಿ, ಮುಖ್ಯಮಂತ್ರಿ, ಸಭಾಪತಿ, ವಿರೋಧ ಪಕ್ಷದ ನಾಯಕ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನು ಬಿಂಬಿಸುವ ವೇಷಧಾರಿಗಳು ಸಮಾರಂಭದಲ್ಲಿ ಪಾಲ್ಗೊಮಡಿದ್ದರು.
ಜಿಲ್ಲೆಯ 12 ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಎಸ್‍ಪಿಸಿ, ಎನ್ನೆಸ್ಸೆಸ್, ಸ್ಕೌಟ್ ಮತ್ತು ಗೈಡ್, ರೆಡ್‍ಕ್ರಾಸ್, ಬುಲ್‍ಬುಲ್, ಬ್ಯಾಂಡ್ ಮೇಳ, ದಫ್ ಇತ್ಯಾದಿ ರ್ಯಾಲಿಗೆ ಮೆರಗು ನೀಡಿತ್ತು. ಸನ್‍ರೈಸ್ ಪಾರ್ಕ್‍ನಲ್ಲಿ ಸ್ಥಾಪಿಸಲಾದ ವೇದಿಕೆಯಲ್ಲಿ ರ್ಯಾಲಿ ಸಂಪನ್ನಗೊಂಡಿತು.
ಮಕ್ಕಳ ರಾಷ್ಟ್ರಪತಿಯಾಗಿ ಆಯ್ಕೆಮಾಡಲಾದ ಮೇಲಂಗೋಡು ಜಿ.ಯು.ಪಿ ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೆ.ಎಸ್.ವಸುಂಧರಾ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಪ್ರಧಾನಮಂತ್ರಿ ಯಾಗಿ ಆಯ್ಕೆಮಾಡಲಾದ ವೆಳ್ಳರಿಕುಂಡ್ ನ ಸೇಂಟ್ ಎಲಿಜಬೆತ್ ಶಾಲೆಯ ಅಬೆಲ್ ಜಿನ್ಸ್ ಸಮಾರಂಭ ಉದ್ಘಾಟಿಸಿದರು. ಪ್ರತಿಪಕ್ಷ ಮುಖಂಡ ಕೀಕಾಲ್ ಆರ್‍ಎಂಎಂಜಿಯುಪಿ ಶಾಲೆಯ ಎಂ. ಅವನಿ ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಮಕ್ಕಳ ದಿನಾಚರಣೆಯ ಅಂಚೆಚೀಟಿ ಬಿಡುಗಡೆ ಮಾಡಿದರು.
ಎ.ಡಿ.ಎಂ.ಪಿ. ಅಖಿಲ್ ಮಕ್ಕಳ ದಿನಾಚರಣೆಯ ಸಂದೇಶ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಒ.ಎಂಬಾಲಕೃಷ್ಣನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಡಿಸಿಪಿಒ ಶೈನಿ ಐಸಾಕ್, ಕಾಸರಗೋಡು ಡಿಇಒ ವಿ.ದಿನೇಶ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ ಕರೀಂ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೋಶಾಧಿಕಾರಿ ಸಿ.ವಿ.ಗಿರೀಶನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜೋ.ಕಾರ್ಯದರ್ಶಿ ಜಯನ್ ಕಾಡಗಂಮೊದಲಾದವರು ಉಪಸ್ಥಿತರಿದ್ದರು.