HEALTH TIPS

ಹರಿಯಾಣದ ಪರಿಸ್ಥಿತಿ ಪುನರಾವರ್ತನೆಯಾಗಲು ಬಿಡುವುದಿಲ್ಲ: ಜೈರಾಮ್‌ ರಮೇಶ್‌

           ವದೆಹಲಿ: ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶವು ಕಾಂಗ್ರೆಸ್‌ ಪರ ಬರಲಿದೆ ಎಂಬ ವಿಶ್ವಾಸ ಇರುವುದಾಗಿ ಪಕ್ಷದ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ.

        'ಗೆಲುವಿನ ವಿಶ್ವಾಸ ಹೊಂದಿರುವ ಜತೆಯಲ್ಲೇ ನಾವು ಹೆಚ್ಚು ಜಾಗರೂಕರಾಗಿದ್ದೇವೆ.

ಏಕೆಂದರೆ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ ಅನಿರೀಕ್ಷಿತವಾಗಿದೆ. ಅಲ್ಲಿ ಬಿಜೆಪಿ ಮತ್ತು ಸ್ಥಳೀಯ ಆಡಳಿತವು ಕೊನೆಯ ಕ್ಷಣದಲ್ಲಿ ತೋರಿದ ಕಿಡಿಗೇಡಿತನದಿಂದ ಪಕ್ಷಕ್ಕೆ ಸೋಲು ಎದುರಾಗಿದೆ. ಹರಿಯಾಣದ ಪರಿಸ್ಥಿತಿಯ ಪುನರಾವರ್ತನೆಯನ್ನು ನಾವು ಬಯಸುವುದಿಲ್ಲ. ಈ ಬಾರಿ ಹೆಚ್ಚು ಜಾಗರೂಕರಾಗಿದ್ದೇವೆ' ಎಂದು ಪಿಟಿಐಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'           ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಪ್ರಬಲವಾಗಿರುವುದರಿಂದ ನಮಗೆ ಗೆಲುವಿನ ಸಂಪೂರ್ಣ ವಿಶ್ವಾಸವಿದೆ. ಜಾರ್ಖಂಡ್‌ನಲ್ಲೂ ನಾವು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries