ನಾವು ಕಾಮ ಕಸ್ತೂರಿ ಬೀಜ, ಚಿಯಾ ಬೀಜಗಳ ಉಪಯೋಗ ಕುರಿತಂತೆ ತಿಳಿದಿದ್ದೇವೆ. ಅಲರ್ಜಿ, ರಕ್ತದೊತ್ತಡ, ದೇಹಕ್ಕೆ ಹೆಚ್ಚು ತಂಪಾಗಬೇಕಾದರೆ ಚಿಯಾ ಬೀಜಗಳು ಬಹಳ ಮುಖ್ಯ. ನೀರು ಹಾಲಿಗೆ ಈ ಚಿಯಾ ಬೀಜ ಹಾಕಿಕೊಂಡು ಕುಡಿದರೆ ದೇಹಕ್ಕೆ ಬಹಳ ಒಳ್ಳೆಯದು. ಚಿಯಾ ಬೀಜದಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹಾಗೆ ಕಾಮಕಸ್ತೂರಿ ಗಿಡದ ಪ್ರಯೋಜನ ಕುರಿತು ನಿಮಗೆ ಗೊತ್ತಾ? ಕಾಮ ಕಸ್ತೂರಿ ಬೀಜಗಳು ಮಾತ್ರವಲ್ಲ ಅದರ ಎಲೆಗಳು ಕೂಡ ಹಲವು ಆರೋಗ್ಯಕರ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಹಾಗಾದ್ರೆ ಈ ಗಿಡ ಹೇಗಿರುತ್ತೆ. ಇದರ ಲಾಭವೇನು? ಯಾವೆಲ್ಲಾ ಸಮಸ್ಯೆಗಳಿಗೆ ಇದು ಪರಿಹಾರ ನೀಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಗಿಡ ಹೆಚ್ಚಾಗಿ ಪೊದೆಯಂತೆ ಬಿಡುತ್ತದೆ. ನೀರು ಹೆಚ್ಚಿರುವ ಜಾಗ ಮಾತ್ರವಲ್ಲ ಒಣ ಭೂಮಿಯಲ್ಲೂ ಈ ಗಿಡಗಳ ನಾವು ನೋಡಬಹುದು. ಈಗ ಎಲ್ಲಾ ನರ್ಸರಿಗಳಲ್ಲೂ ಈ ಗಿಡ ಸಿಗುತ್ತದೆ. ಕೆಲವರು ಮನೆಯ ಟೆರೆಸ್ ಮೇಲೆ, ಅಂಗಳದಲ್ಲಿ ನೆಟ್ಟು ಬೆಳೆಸುತ್ತಾರೆ. ಹಾಗಾದ್ರೆ ಇದರಿಂದ ಆಗುವ ಪ್ರಯೋಜನಗಳ ನಾವಿಂದು ನೋಡೋಣ.
ಈ ಕಾಮಕಸ್ತೂರಿ ಬೀಜವನ್ನು ನೀರಿಗೆ ಹಾಕಿ ಕುಡಿಯುವುದು ಸಾಮಾನ್ಯ. ಇದರಿಂದ ದೇಹಕ್ಕೆ ಉತ್ತಮ ಶಕ್ತಿ, ತಂಪು ನೀಡಲಿದೆ. ಈ ಬೀಜದಲ್ಲಿ ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅಂಶಗಳಿವೆ. ಹೀಗಾಗಿ ರಾತ್ರಿ ನೆನೆಸಿ ಇಟ್ಟು ಬೆಳಗ್ಗೆ ಕುರಿಯುತ್ತಾರೆ. ಇವುಗಳ ಎಲೆಗಳು ಸುಗಂಧ ದ್ರವ್ಯ ತಯಾರಿಕೆಗೂ ಬಳಕೆಯಾಗುತ್ತದೆ.
ಕಾಮಕಸ್ತೂರಿ ಹೂವು ಒಣಗಿದ ಬಳಿಕ ಅದರಿಂದ ನಾವು ಬೀಜ ಪಡೆಯಬಹುದು. ಮನೆಯಲ್ಲಿ ನೆಟ್ಟರೆ ಅದು ತುಳಸಿ ಗಿಡದಂತೆ ಕರೆಯನ್ನು ಬಿಡುತ್ತದೆ. ಈ ದಂಟಿನಲ್ಲಿ ಬೀಜಗಳು ಅಡಗಿರುತ್ತದೆ. ಈ ಹೂವನ್ನು ಒಣಗಿಸಿ ಬಳಿಕ ಕೈಯಲ್ಲಿ ಪುಡಿ ಮಾಡಿದರೆ ಬೀಜಗಳು ಸಿಗುತ್ತವೆ. ನಿತ್ಯ ಈ ಬೀಜ ಸೇವಿಸಿದರೆ ತೂಕ ಸಹ ಇಳಿಸಲು ಸಹಕಾರಿಯಾಗಲಿದೆ.
ಈ ಕಾಮ ಕಸ್ತೂರಿ ಬೀಜವು ಉರಿ ಮೂತ್ರ, ಬಾಯಲ್ಲಿ ಹುಣ್ಣು, ಹೊಟ್ಟೆ ಹಾಗೂ ಎದೆ ಉರಿಯಂತಹ ಸಮಸ್ಯೆ ಆದಾಗಲು ಕೂಡ ಬಳಸುತ್ತಾರೆ. ಮಲಬದ್ಧತೆ, ಅಜೀರ್ಣ, ಗ್ಯಾಸ್ಟಿಕ್ ಸಮಸ್ಯೆ, ವಾಕರಿಕೆ ಸೇರಿ ಮಧುಮೇಹಿಗಳು ಕೂಡ ಈ ಕಾಮ ಕಸ್ತೂರಿ ಬೀಜವನ್ನು ಸೇವಿಸಬಹುದು.
ನೀವೆ ಗಿಡ ಬೆಳೆಯುವುದು ಹೇಗೆ?
ಮೊದಲು ಈ ಕಾಮಕಸ್ತೂರಿ ಬೀಜವನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ನೀರು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಇದನ್ನು ಒಂದು ತೆಳುವಾದ ಪೇಪರ್ ಮೇಲೆ ಹಾಕಿಟ್ಟು ಅದನ್ನು ಒಂದು ಪಾತ್ರೆಯಲ್ಲಿ ಮುಚ್ಚಿ ಇಡಬೇಕು. 2 ದಿನಗಳ ಬಳಿಕ ಈ ಪೇಪರ್ ಬಿಡಿಸಿ ನಂತರ ಒಂದು ಪಾಟ್‌ನಲ್ಲಿ ಇದನ್ನು ಹಾಕಿ ಇಡಿ. ಎಲ್ಲಾ ಬೀಜವನ್ನು ಒಂದೇ ಕಡೆ ಹಾಕಬೇಡಿ. ಗುಂಪು ಗುಂಪಾಗಿ ಹಾಕಿ. ಏಕೆಂದರೆ ಎಲ್ಲಾ ಬೀಜಗಳು ಗಿಡಗಳಾಗಿ ಮೊಳಕೆ ಒಡೆಯುವುದು ಕಷ್ಟ. ಒಂದು ವಾರದ ತನಕ ನೀರು ನೀಡುತ್ತಾ ಇರಿ. ಇದಾಗಿ 15 ದಿನಗಳಿಗೆ ಇದರಲ್ಲಿ ಚಿಕ್ಕ ಬಿಳಿ ಬಣ್ಣದ ಮೊಳಕೆ ಬರುವುದು ನೋಡಬಹುದು.
ಈ ಗಿಡಗಳು ವರ್ಷದಲ್ಲಿ ಒಂದು ಬಾರು ಹೂವುಗಳ ಬಿಡುತ್ತದೆ. ಈ ಹೂವುಗಳು ಬಲಿತ ನಂತರ ಅದನ್ನು ಕತ್ತರಿಸಿ ಒಣಗಿಸಿ ಅದರಿಂದ ಬೀಜಗಳ ತೆಗೆಯಲಾಗುತ್ತದೆ. ಈಗ ಇದೊಂದು ವಾಣಿಜ್ಯ ಉದ್ದೇಶದಿಂದಲೂ ಬೆಳೆಯಲಾಗುತ್ತಿದೆ.