HEALTH TIPS

ಎಡನೀರು ಶ್ರೀಗಳ ವಾಹನಕ್ಕೆ ಅಕ್ರಮಿಸಿದವರನ್ನು ಬಂಧಿಸಲು ಆಗ್ರಹ- ಬದಿಯಡ್ಕದಲ್ಲಿ ಹಿಂದೂಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

ಬದಿಯಡ್ಕ: ನಾಡಿನ ಶಾಂತಿ ಸಮಾಧಾನವನ್ನು ಹಾಳುಗೆಡಹುವಲ್ಲಿ ಕಾರಣವಾದ ಸಮಾಜ ವಿದ್ರೋಹಿಗಳ ಗುಂಪನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸ್ ಇಲಾಖೆಯು ನಿರ್ಲಕ್ಷ್ಯವನ್ನು ತೋರುತ್ತಿದೆ. ದೇಶದಾದ್ಯಂತ ಪೂಜಿಸಲ್ಪಡುವ ಕೇರಳದ ಏಕೈಕ ಶಂಕರಾಚಾರ್ಯ ಪೀಠದ ಯತಿಗಳಿಗೆ ಕಾಸರಗೋಡು ಜಿಲ್ಲೆಯಲ್ಲಿ ಆದ ಅನ್ಯಾಯವನ್ನು ಇಡೀ ಹಿಂದೂಸಮಾಜವು ಎದುರಿಸುತ್ತದೆ ಎಂದು ಪರಿವಾರ ಸಂಘಟನೆಗಳ ಮುಖಂಡ ಸುನಿಲ್ ಪಿ.ಆರ್. ಹೇಳಿದರು.

ಎಡನೀರು ಶ್ರೀಗಳ ವಾಹನಕ್ಕೆ ಹಾನಿಗೈದವರನ್ನು ಬಂಸಬೇಕೆಂದು ಆಗ್ರಹಿಸಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಮುಖಂಡರಾದ ಸಂಕಪ್ಪ ಭಂಡಾರಿ, ಸುಧಾಮ ಗೋಸಾಡ, ಹರಿಪ್ರಸಾದ ರೈಪುತ್ರಕ್ಕಳ, ಮಂಜುನಾಥ ಮಾನ್ಯ, ಸುನಿಲ್ ಕಿನ್ನಿಮಾಣಿ, ಪರಿವಾರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಗಣೇಶ್ ಮಾವಿನಕಟ್ಟೆ ವಂದಿಸಿದರು. ಬದಿಯಡ್ಕ ಮೇಲಿನ ಪೇಟೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ಸುತಂಗುದಾಣದಲ್ಲಿ ಸಮಾಪನಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries