ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಿಂದ ಕೋಡಿ ಶ್ರೀ ರಕ್ತೇಶ್ವರೀ ಪ್ರಸಾದಿತ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆಗೊಂಡಿತು. ಭಾಗವತರಾದ ರತ್ನಾಕರ ಅಳ್ವ ತಲಪಾಡಿ ಯಕ್ಷಗಾನ ಹಿಮ್ಮೇಳದೊಂದಿಗೆ ಪ್ರಾರ್ಥನೆಯನ್ನು ಹಾಡಿದರು. ನಂತರ ರಕ್ತೇಶ್ವರಿ ಕ್ಷೇತ್ರ ಬೇರಿಕೆ ಇದರ ಗೌರವಾಧ್ಯಕ್ಷÀ ಶಿವಪ್ರಸಾದ್ ಭಟ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರುಗಳಾದ ಕೃಷ್ಣಪ್ಪ ಕಿನ್ಯ ಹಾಗೂ ಸತೀಶ ಅಡಪ ಸಂಕಬೈಲು, ಯಕ್ಷಗಾನ ಅಕಾಡೆಮಿಯ ಬಗ್ಗೆ ವಿವರಣೆ ನೀಡಿದರು. ಮೀಯಪದವು ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾವi ರಾವ್ ಯಕ್ಷಗಾನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷÀ ವಾಸುದೇವ ಶೆಟ್ಟಿ ಪಳ್ಳತ್ತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸದಾಶಿವ ರೈ ಪಳ್ಳತ್ತಡ್ಕ, ನಾರಾಯಣ ಪೂಜಾರಿ ಬೆಜ್ಜಂಗಳ, ನಾರಾಯಣ ಬಂಗೇರ ಕೊಮ್ಮಂಗಳ, ದಿನಕರ ಭಟ್ ಕೋಡಿ, ರಾಜಾನಂದ ಶೆಟ್ಟಿ, ಯೋಗೀಶ ಶೆಟ್ಟಿ ಹಾಗೂ ತರಬೇತಿ ಕೇಂದ್ರದ ಮಹಿಳಾ ಸದಸ್ಯೆ ಭಾಗ್ಯಲಕ್ಷ್ಮಿ ಬೇರಿಕೆ ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಪಳತ್ತಡ್ಕ ಸ್ವಾಗತಿಸಿ, ಪದ್ಮನಾಭ ಕಟ್ಟೆ ವಂದಿಸಿದರು. ಪುಷ್ಪರಾಜ ಶೆಟ್ಟಿ ತಲೇಕಳ ಕಾರ್ಯಕ್ರಮ ನಿರೂಪಿಸಿದರು.