ತಿರುವನಂತಪುರಂ: ಕೇರಳ ವಯನಾಡು ದುರಂತದ ನಿಖರ ವಿವರವನ್ನು ಕೇಂದ್ರಕ್ಕೆ ತಿಳಿಸಬೇಕು ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ರಾಜ್ಯ ನೀಡಿರುವ ಅಂಕಿ ಅಂಶ ಸರಿಯಾಗಿಲ್ಲ. ರಾಜ್ಯದಲ್ಲಿ ಪ್ರಸ್ತುತ ಹಣವಿದೆ. ಖರ್ಚು ಮಾಡಿದ ನಂತರ, ಕೇಂದ್ರವನ್ನು ಕೇಳಿ. ನೆರವು ನೀಡಲು ಕೇಂದ್ರವು ಮಾನದಂಡಗಳನ್ನು ಹೊಂದಿದೆ. ನೆರವು ಸಿಕ್ಕಿಲ್ಲ ಎಂಬ ರಾಜ್ಯದ ವಾದ ಸರಿಯಲ್ಲ. ಪುನರ್ವಸತಿಯನ್ನು ಬೇರೆಯವರಿಗಿಂತ ಹೆಚ್ಚಾಗಿ ಖಾತ್ರಿಪಡಿಸುತ್ತೇನೆ ಎಂಬ ಪ್ರಧಾನಿಯವರ ಮಾತಿನಲ್ಲಿ ನಂಬಿಕೆ ಇದೆ ಎಂದು ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ವಯನಾಡ್ ಭೂಕುಸಿತ ದುರಂತದಲ್ಲಿ ಹೈಕೋರ್ಟ್ ಕೂಡ ರಾಜ್ಯ ಸರ್ಕಾರವನ್ನು ಟೀಕಿಸಿತ್ತು. ಇನ್ನು ಹೆಚ್ಚಿನ ನೆರವು ನೀಡುವುದಿಲ್ಲ ಎಂದು ಕೇಂದ್ರ ಹೇಳಿಲ್ಲ ಎಂದು ಹೈಕೋರ್ಟ್ ಬೆಟ್ಟು ಮಾಡಿದೆ. ಕೇಂದ್ರ ಸಚಿವ ನಿತ್ಯಾನಂದ ರೈ ಕೇರಳಕ್ಕೆ ಕಳುಹಿಸಿದ್ದ ಪತ್ರವನ್ನು ರಾಜ್ಯ ಸರ್ಕಾರ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಇರುವ ಅಡ್ಡಿ ಏನೆಂದು ಸ್ಪಷ್ಟವಾಗಿ ಹೇಳುತ್ತದೆ. ಎಸ್ ಡಿಆರ್ ಎಫ್ ನಿಧಿಯಲ್ಲಿರುವ ಮೊತ್ತವನ್ನು ಪರಿಹಾರಕ್ಕೆ ಬಳಸಿಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದನ್ನು ರಾಜ್ಯ ಸರ್ಕಾರ ತೀವ್ರವಾಗಿ ಟೀಕಿಸಿತ್ತು. ಆದರೆ ವಿಶೇಷ ಆರ್ಥಿಕ ನೆರವು ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈಗಾಗಲೇ ಕೇಂದ್ರ ತಂಡವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿತ್ತು. ಈ ವರದಿಯು ಉನ್ನತಾಧಿಕಾರ ಸಮಿತಿಯಲ್ಲಿದೆ. ಸಮಿತಿಯ ಸಭೆಯ ನಂತರ ವಿಶೇಷ ಆರ್ಥಿಕ ನೆರವು ಸೇರಿದಂತೆ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.