ಪತ್ತನಂತಿಟ್ಟ: ಇರುಮುಡಿಕಟ್ಟದಲ್ಲಿ ಅಯ್ಯಪ್ಪ ಭಕ್ತರು ಅನಗತ್ಯ ವಸ್ತುಗಳನ್ನು ಉಪಯೋಗಿಸದಂತೆ ಶಬರಿಮಲೆ ತಂತ್ರಿ ಕೋರಿದ್ದಾರೆ. ಇರುಮುಡಿಕಟ್ಟಲ್ಲಿ ಯಾವ ವಸ್ತುಗಳನ್ನು ಸೇರಿರÀಬೇಕು ಎಂದು ಸೂಚಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷರಿಗೆ ತಂತ್ರಿ ಕಂಠಾರರ್ ರಾಜೀವರ್ ಪತ್ರ ಬರೆದಿದ್ದಾರೆ.
ಹಿಂದಿನ ಗಂಟಿನಲ್ಲಿ ಅಕ್ಕಿಯನ್ನು ಮಾತ್ರ ಇರಿಸÀಬೇಕು ಮತ್ತು ಶ್ರೀಗಂಧ, ಕರ್ಪೂರ ಮತ್ತು ರೋಸ್ ವಾಟರ್ ಅನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ. ಪ್ಲಾಸ್ಟಿಕ್ ಕೂಡ ನಿಷೇಧಿಸಲಾಗಿದೆ.
ಮುಂದಿನ ಗಂಟಿನಲ್ಲಿ ಒಣಗಿದ ಕೇಸರಿ, ತೆಂಗಿನಕಾಯಿ, ಬೆಲ್ಲ, ವೀಳ್ಯದೆಲೆ, ಅಡಕೆ ಮತ್ತು ಕಾಣಿಕೆ ಮಾತ್ರ ಸಾಕು ಎಂದು ಸೂಚಿಸಲಾಗಿದೆ. ತಂತ್ರಿಯವರ ಪ್ರಸ್ತಾವನೆಯನ್ನು ಕೇರಳದ ಇತರ ದೇವಸ್ವಂ ಮಂಡಳಿಗಳ ಅಧ್ಯಕ್ಷರು, ಆಯುಕ್ತರು ಇತ್ಯಾದಿಗಳಿಗೂ ತಿಳಿಸಲಾಗುವುದು.
ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದಲ್ಲಿರುವ ಎಲ್ಲ 1252 ದೇವಸ್ಥಾನಗಳ ಗುರುಸ್ವಾಮಿಗಳು ಇದನ್ನು ಪಾಲಿಸುವಂತೆ ಸೂಚನೆ ನೀಡುವಂತೆ ಪತ್ರ ನೀಡಲಾಗುವುದು ಎಂದು ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರು ತರುವ ಇರುಮುಡಿಕಟ್ಟಲ್ಲಿ ಪ್ಲಾಸ್ಟಿಕ್ ಬರುತ್ತಿದೆ. ಇದರಿಂದ ಶಬರಿಮಲೆಯಲ್ಲಿ ಭಾರಿ ಪರಿಸರ ಸಮಸ್ಯೆ ಉಂಟಾಗುತ್ತಿದೆ.
ಇರುಮುಡಿಕಟ್ಟಿಗೆ ಎರಡು ಭಾಗಗಳಿದ್ದು, ಮುಂಭಾಗದಲ್ಲಿ ಶಬರಿಮಲೆಯಲ್ಲಿ ಅರ್ಪಿಸುವ ಪದಾರ್ಥಗಳು ಮತ್ತು ಹಿಂದಿನ ಭಾಗವು ಆಹಾರ ಪದಾರ್ಥಗಳು. ಹಿಂದಿನ ಕಾಲದಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಬರುವಾಗ ಅಕ್ಕಿ, ತೆಂಗಿನಕಾಯಿ ಇತ್ಯಾದಿಗಳನ್ನು ಬೆನ್ನ ಮೇಲೆ ತಂದು ಸ್ವತಃ ಊಟ ತಯಾರಿಸುತ್ತಿದ್ದರು.
ಈಗ ಎಲ್ಲೆಂದರಲ್ಲಿ ಆಹಾರ ಸಿಗುವುದರಿಂದ ಅದರ ಅವಶ್ಯಕತೆ ಇಲ್ಲ. ಹಿಂಬದಿ ಕಟ್ಟಲ್ಲಿ ಸ್ವಲ್ಪ ಅಕ್ಕಿಯನ್ನು ಇರಿಸಿ. ಇದನ್ನು ಶಬರಿಮಲೆಯಲ್ಲಿ ನೀಡುವ ಬಿಳಿಯ ಕಾಣಿಕೆಯಾಗಿ ಬಳಸಲಾಗುತ್ತದೆ. ಮುಂಭಾಗದ ಗಂಟುಗಳಲ್ಲಿ ಶ್ರೀಗಂಧ, ಕರ್ಪೂರ ಗಳನ್ನು ತಪ್ಪಿಸಬೇಕು. ಇನ್ನಿಲ್ಲಿ ಬಳಸಲಾಗದು. ಹಿಂದಿನ ಗಂಟುಗೆ ಒಣಕೊಬ್ಬರಿ, ತೆಂಗಿನಕಾಯಿ, ಬೆಲ್ಲ, ಕದಳಿ ಫಲ, ವೀಳ್ಯದೆಲೆ, ಅಡಕೆ, ಕಾಣಿಕೆ ಮಾತ್ರ ಸಾಕು ಎಂದು ತಂತ್ರಿಯವರ ಪತ್ರದಲ್ಲಿ ಹೇಳಲಾಗಿದೆ.