ಕಾಸರಗೋಡು: ಡಿಜಿಟಲ್ ಸೇವಾ ಪೆÇೀರ್ಟಲ್‍ನಲ್ಲಿ ಲಭ್ಯವಿರುವ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಅಕ್ಷಯ ಕೇಂದ್ರಗಳಲ್ಲಿ ವಿದ್ಯುತ್ ಬಿಲ್ ಗಳನ್ನು ಸ್ವೀಕರಿಸಲಾಗುವುದು. ಗ್ರಾಹಕರು ಮೊಬೈಲ್ ಮತ್ತು ಇತರ ಯುಟಿಲಿಟಿ ಬಿಲ್‍ಗಳನ್ನು ಪಾವತಿಸಲು ಬಿಬಿಪಿಎಸ್ ಸೇವೆಗಳನ್ನು ಬಳಸಬಹುದಾಗಿದೆ. ಭಾರತ್ ಬಿಲ್ ಪಾವತಿ ವ್ಯವಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯ ಉಪಕ್ರಮವಾಗಿದ್ದು, ಸಮಗ್ರ ಮತ್ತು ಸುರಕ್ಷಿತ ಬಿಲ್ ಪಾವತಿ ಸೇವೆಗಳನ್ನು ನೀಡುತ್ತದೆ. ಇದು ತ್ವರಿತ ಪರಿಶೀಲನೆಯೊಂದಿಗೆ ಆನ್‍ಲೈನ್ ಮತ್ತು ಏಜೆಂಟ್-ಆಧಾರಿತ ವಹಿವಾಟುಗಳನ್ನು ಒಳಗೊಂಡಂತೆ ಬಹು ಪಾವತಿ ವಿಧಾನಗಳನ್ನು ಒದಗಿಸುವುದರೊಂದಿಗೆ ನಗದಿನಿಂದ ಎಲೆಕ್ಟ್ರಾನಿಕ್ ಪಾವತಿಗಳಿಗಿರುವ ಪರಿವರ್ತನೆಯನ್ನು ಸುಲಭಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.