ತಿರುವನಂತಪುರ: ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕೆಎಸ್ ಇಬಿ ಹೊಸ ವ್ಯವಸ್ಥೆಗೆ ಮುಂದಾಗಿದೆ. ಬಿಲ್ ಪಾವತಿಸಲು ಮರೆತರೆ ಕೆಎಸ್ ಇಬಿ ಎಸ್ ಎಂಎಸ್ ವ್ಯವಸ್ಥೆ ಮಾಡಿದೆ.
ವಿದ್ಯುತ್ ಬಿಲ್ ಪಾವತಿಸುವ ದಿನಾಂಕದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರ ದಾಖಲೆಗಳೊಂದಿಗೆ ಪೋನ್ ಸಂಖ್ಯೆಯನ್ನು ಸೇರಿಸಿದರೆ, ವಿದ್ಯುತ್ ಬಿಲ್ ಬಾಕಿ ಇರುವ ದಿನಾಂಕವನ್ನು ಎಸ್.ಎಂ.ಎಸ್.(ಮೊಬೈಲ್ ಮೆಸೇಜಿಂಗ್-ಶೋರ್ಟ್ ಮೆಸೇಜ್ ಸರ್ವಿಸ್) ಎಚ್ಚರಿಕೆಯಾಗಿ ಕಳುಹಿಸಲಾಗುತ್ತದೆ.
ವಿದ್ಯುತ್ ಬಿಲ್ ಮಾಹಿತಿ, ವಿದ್ಯುತ್ ನಿಲುಗಡೆ ಎಚ್ಚರಿಕೆ ಇತ್ಯಾದಿಗಳು ಸಹ ಲಭ್ಯವಿರುತ್ತವೆ. ಣಣಠಿs://ತಿss.ಞseb.iಟಿ/seಟಜಿseಡಿviಛಿes/ಡಿegisಣeಡಿmobiಟe ವೆಬ್‍ಸೈಟ್ ಮೂಲಕ, ವಿಭಾಗ ಕಚೇರಿಯಲ್ಲಿನ ನಗದು ಕೌಂಟರ್ ಮೂಲಕ ಮತ್ತು ಮೀಟರ್ ರೀಡರ್‍ನ ಕೈಯಲ್ಲಿರುವ ಬಿಲ್ಲಿಂಗ್ ಯಂತ್ರದ ಮೂಲಕ ಪೋನ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬಹುದು. ಈ ಸೇವೆ ಸಂಪೂರ್ಣ ಉಚಿತವಾಗಿದೆ ಎಂದು ಕೆಎಸ್‍ಇಬಿ ಮಾಹಿತಿ ನೀಡಿದೆ.