HEALTH TIPS

ವಕ್ಫ್‌ ತಿದ್ದುಪಡಿ ಮಸೂದೆ: ಜೆಪಿಸಿ ಪ್ರವಾಸ ಬಹಿಷ್ಕರಿಸಲು ಸದಸ್ಯರ ನಿರ್ಧಾರ

 ವದೆಹಲಿ: ವಕ್ಫ್‌ ಕಾಯ್ದೆಗೆ ಉದ್ದೇಶಿತ ತಿದ್ದುಪಡಿ ಸಂಬಂಧಿಸಿ ವಿವಿಧ ಭಾಗೀದಾರರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಲುವಾಗಿ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಇದೇ ಶನಿವಾರದಿಂದ ಆರಂಭಿಸಲಿರುವ ಪ್ರವಾಸವನ್ನು ಬಹಿಷ್ಕರಿಸಲು ಸಮಿತಿಯಲ್ಲಿನ ವಿಪಕ್ಷಗಳ ಸದಸ್ಯರು ನಿರ್ಧರಿಸಿದ್ದಾರೆ.

'ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಮನಸ್ಸಿಗೆ ತೋಚಿದಂತೆ ಹಾಗೂ ಒತ್ತಡಕ್ಕೆ ಮಣಿದವರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸಮಿತಿ ಕೈಗೊಂಡಿರುವ ಐದು ದಿನಗಳ ಪ್ರವಾಸ ಹಾಗೂ ಸಭೆಗಳನ್ನು ಬಹಿಷ್ಕರಿಸಲು ಜೆಪಿಸಿಯ ವಿಪಕ್ಷಗಳ ಎಲ್ಲ ಸದಸ್ಯರು ನಿರ್ಧರಿಸಿದ್ದೇವೆ' ಎಂದು ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಹಾಗೂ ನದಿಮುಲ್ ಹಕ್‌ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


'ಜಗದಂಬಿಕಾ ಪಾಲ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ತೀರ ಸ್ಥಳೀಯವಾದ ವಿಷಯಯೊಂದರ ಪರಿಶೀಲನೆಗಾಗಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ' ಎಂದು ಟೀಕಿಸಿದರು.

'ಸಮಿತಿ ಅಧ್ಯಕ್ಷ ಪಾಲ್‌ ಅವರು ಪ್ರವಾಸದ ವೇಳೆ ಗುವಾಹಟಿ, ಭುವನೇಶ್ವರ, ಕೋಲ್ಕತ್ತ, ಪಟ್ನಾ ಹಾಗೂ ಲಖನೌಗಳಲ್ಲಿ ನಿರಂತರ ಸಭೆಗಳನ್ನು ನಿಗದಿ ಮಾಡಿದ್ದಾರೆ' ಎಂದು ಬ್ಯಾನರ್ಜಿ ದೂರಿದರು.

ಪ್ರವಾಸ ಕಾರ್ಯಕ್ರಮ: ಸಮಿತಿಯು ಶನಿವಾರ ಗುವಾಹಟಿಯಿಂದ ಪ್ರವಾಸ ಆರಂಭಿಸಲಿದೆ. ಈ ವೇಳೆ, ಅಸ್ಸಾಂ, ಮೇಘಾಲಯ, ಮಣಿಪುರ ಹಾಗೂ ತ್ರಿಪುರಾ ರಾಜ್ಯಗಳ ಅಲ್ಪಸಂಖ್ಯಾತರ ಆಯೋಗ, ಕಾನೂನು ಇಲಾಖೆ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.

ನ.11ರಂದು ಭುವನೇಶ್ವರ, 12ರಂದು ಪಶ್ಚಿಮ ಬಂಗಾಳ, 13ರಂದು ಬಿಹಾರ ಹಾಗೂ 14ರಂದು ಲಖನೌಗೆ ಭೇಟಿ ನೀಡಲಿದೆ.

 ಅಸಾದುದ್ದೀನ್‌ ಒವೈಸಿ

ಸಮಿತಿಗೆ ತನಿಖೆ ಅಧಿಕಾರ ಇಲ್ಲ: ಒವೈಸಿ

'ಸಮಿತಿಯು ಮಸೂದೆ ಕುರಿತು ಮಾತ್ರ ಪರಿಶೀಲನೆ ನಡೆಸಬಹುದಾಗಿದ್ದು ಯಾವುದೇ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿಲ್ಲ. ಅಧ್ಯಕ್ಷ ಪಾಲ್‌ ಅವರು ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುವಂತಿಲ್ಲ ಹಾಗೂ ಸಮಿತಿಯು ಸಾಂಸ್ಥಿಕವಾಗಿಯೇ ಕಾರ್ಯ ನಿರ್ವಹಿಸಬೇಕು' ಎಂದು ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. 'ಸಮಿತಿ ಈಗಾಗಲೇ ಕರ್ನಾಟಕಕ್ಕೆ ಭೇಟಿ ನೀಡಿ ವಿವಿಧ ಭಾಗೀದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಿದೆ' ಎಂದಿದ್ದಾರೆ. 'ನಾವು ಸಂಸದೀಯ ಪ್ರಕ್ರಿಯೆಯಂತೆಯೇ ನಡೆದುಕೊಳ್ಳಬೇಕು. ಹೀಗಾಗಿ ಸಮಿತಿ ಅಧ್ಯಕ್ಷರ ಪ್ರಶ್ನಾರ್ಹ ನಡವಳಿಕೆ ಕುರಿತು ವಿವರಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಸಮಿತಿ ಅಧ್ಯಕ್ಷ ಈ ವರ್ತನೆ ಕುರಿತು ಲೋಕಸಭಾ ಸ್ಪೀಕರ್‌ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ' ಎಂದೂ ಪೋಸ್ಟ್‌ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries