ಗುರುವಾರ ಕುಂಬಳೆ ಸಮೀಪದ ಜಿ.ಬಿ.ಎಲ್.ಪಿ.ಎಸ್. ಬಂಬ್ರಾಣ ಶಾಲಾ ಪರಿಸರದಲ್ಲಿ ಇಂತಹದೊಂದು ಘಟನೆ ಕಳವಳಕ್ಕೆ ಕಾರಣವಾಗಿರುವುದು ವರದಿಯಾಗಿದೆ.
ಬಂಬ್ರಾಣ ಶಾಲಾ ಆವರಣಕ್ಕೆ ಏಕಾಏಕಿ ಅಕ್ರಮವಾಗಿ ಪ್ರವೇಶಿಸಿ ಮುಂಭಾಗದ ಆಟದ ಬಯಲಿಗೆ ನುಗ್ಗಿದ ಎರಡು ಅಪರಿಚಿತ ಕಾರುಗಳು ಅತ್ತಿಂದಿತ್ತ ಹಲವು ಬಾರಿ ಠಳಾಯಿಸಿ ಕೆಲವು ಹೊತ್ತು ಭೀತಿಯ ವಾತಾವರಣ ಸೃಷ್ಟಿಸಿದವು. ಧೂಳೆಬ್ಬಿಸುತ್ತ ಶಾಲಾ ಬಯಲಿನಲ್ಲಿ ದೂಂಡಾವರ್ತನೆ ನಡೆಸಿದ ಎರಡೂ ಕಾರುಗಳ ಲಕ್ಷ್ಯ ಏನೆಂಬುದು ಈ ವರೆಗೂ ತಿಳಿದುಬಂದಿಲ್ಲ. ಪುಟಾಣಿಗಳು ಕುಣಿದು ಕುಪ್ಪಳಿಸುವ ಬಯಲಿಗೆ ಅತಿ ವೇಗದಲ್ಲಿ ಪ್ರವೇಶಿಸಿ ಬಯಲಲ್ಲಿಡೀ ದೂಳೆಬ್ಬಿಸಿ ಠಳಾಯಿಸುವ ವೇಳೆ ಮಕ್ಕಳೇನಾದರೂ ಇದ್ದಿದ್ದರೆ ಕೆಲವಷ್ಟು ಜೀವಹಾನಿಯಾಗುತ್ತಿತ್ತು ಎಂಬುದು ಶಾಲಾ ಅಧಿಕೃತರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಿದ ಬಳಿಕ ಪೋಲೀಸರು ಇಬ್ಬರನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದರು. ನಿನ್ನೆ ಉನ್ನತ ಮೂಲಗಳ ಕ್ಯೆವಾಡದಿಂದ ಇಬ್ಬರು ದುಷ್ಕರ್ಮಿಗಳು ಜಾಮೀನು ಮೇಲೆಗೆ ಬಿಡುಗಡೆಗೊಂಡರು. ಅಲ್ಲದೆ ರಾಜಕೀಯ ನೇತಾರರ ಕರೆ ಶಾಲಾ ಮುಖ್ಯೋಪಾಧ್ಯಾಯರನ್ನು ಬೆದರಿಸಿ ದೂರು ಹಿಂಪಡೆಯುವಂತೆ ಸೂಚಿಸಿತು. ಆದರೆ ಮುಖ್ಯೋಪಾಧ್ಯಾಯರು ಬೆದರಿಕೆಗೆ ಬಗ್ಗದೆ ದೂರನ್ನು ಊರ್ಜಿತದಲ್ಲಿರಿಸಿರುವರೆಂದು ತಿಳಿದುಬಂದಿದೆ.
ಇಂತಹ ದುಷ್ಕೃತ್ಯಗಳಿಗೆ ರಾಜಕೀಯ ನೇತಾರರೇ ಆಸರೆಯಾಗಿರುವುದು ತಿವ್ರ ಆತಂಕ ಹಾಗೂ ಹತಾಶೆಗೆ ಕಾರಣವಾಗಿದೆ.
(ಜಾಹೀರಾತು.)