HEALTH TIPS

ಬಸ್ಸಿನಿಂದ ನಿರ್ವಾಹಕನ ನಗದು ಕಳವು-ಆರೋಪಿಗೆ ನ್ಯಾಯಾಂಗ ಬಂಧನ

ಮಂಜೇಶ್ವರ: ನಿಲುಗಡೆಗೊಳಿಸಿದ್ದ ಬಸ್ಸಿನಿಂದ 10ಸಾವಿರ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ವಾಣೀನಗರ ನಿವಾಸಿ ಉಮ್ಮರ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸ್ ನಿರ್ವಾಹಕ ಸೋಂಕಾಲು ಕೋಡಿಬೈಲು ನಿವಾಸಿ ಅಬ್ದುಲ್ ಲತೀಫ್ ನೀಡಿದ ದೂರಿನನ್ವಯ ಈ ತನನ್ನು ಬಂಧಿಸಲಾಗಿದೆ. 

ತಲಪ್ಪಾಡಿಯಲ್ಲಿ ನ. 5ರಂದು ಕಳವು ನಡೆದಿದ್ದು, ಮಧ್ಯಾಹ್ನ ಬಸ್ ಸಿಬ್ಬಂದಿ ರಸ್ತೆಬದಿ ಬಸ್ ನಿಲ್ಲಿಸಿ ಊಟಕ್ಕೆ ತೆರಳಿದ್ದ ಸಂದರ್ಭ ಚಾಲಕನ ಸೀಟಿನ ಮೇಳಿನ ಪೆಟ್ಟಿಗೆಯಲ್ಲಿರಿಸಿದ ನಗದು ಕಳವುಗೈಯಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗಬಂಧನ ವಿಧಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries