HEALTH TIPS

ಸಹೋದ್ಯೋಗಿಗಳ ಎಡವಟ್ಟು: ಎಂಜಿನ್-ಕೋಚ್ ನಡುವೆ ಅಪ್ಪಚ್ಚಿಯಾದ ರೈಲ್ವೆ ಉದ್ಯೋಗಿ!

            ಬೇಗುಸರಾಯ್: ರೈಲು ಎಂಜಿನ್ ಮತ್ತು ಕೋಚ್ ನಡುವೆ ಸಿಲುಕಿ ರೈಲ್ವೆಯ ಡಿ ಗ್ರೂಪ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ನಡೆದಿದೆ.    ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತ ವ್ಯಕ್ತಿ.

           ಫ್ಲಾಟ್‌ಫಾರ್ಮ್‌ 5ರಲ್ಲಿ ನಿಂತಿದ್ದ ಲಖನೌ-ಬರೌನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಮತ್ತು ಕೋಚ್ ಅನ್ನು ಜೋಡಿಸುವ ಕೆಲಸವನ್ನು ಶನಿವಾರ ಬೆಳಿಗ್ಗೆ 8.10 ರ ಸುಮಾರು ಅಮರ್ ಕುಮಾರ್ ನಿರ್ವಹಿಸುತ್ತಿದ್ದರು.

ಈ ವೇಳೆ ಪ್ಲೇಟ್‌ಗಳ ನಡುವೆ ಸಿಲುಕಿದ ಅಮರ್ ಕುಮಾರ್, ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

                ರೈಲ್ವೆಯ ಸಹೋದ್ಯೋಗಿಗಳ ಎಡವಟ್ಟಿನಿಂದ ಈ ದುರಂತ ಸಂಭವಿಸಿದೆ ಎಂದು ಪೂರ್ವ ಕೇಂದ್ರ ವಲಯದ ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪಾಯಿಂಟ್‌ಮೆನ್‌ಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯ ಫೋಟೊ, ವಿಡಿಯೊ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದ್ದು ರೈಲ್ವೆ ಸಚಿವರನ್ನು, ಅಧಿಕಾರಿಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries