ವಾಟ್ಸಾಪ್‌ನಲ್ಲಿ ಮದುವೆ ಕಾರ್ಡ್ ಕಳುಹಿಸಿ ವಂಚನೆ! ನೀವು ಈ ತಪ್ಪುಗಳನ್ನು ಮಾಡಲೇಬೇಡಿ!
0samarasasudhiನವೆಂಬರ್ 25, 2024
ಪ್ರಸ್ತುತ ಚಳಿಗಾಲದೊಂದಿಗೆ ಮದುವೆ ಸೀಸನ್ ಸಹ ಶುರುವಾಗಿದೆ ಇದರ ಪ್ರಯೋಜನಗಳನ್ನು ದೂರದಲ್ಲಿ ಕುಳಿತಿರುವ ಸಂಬಂಧಿಕರು ಸ್ನೇಹಿತರು ಅಥವಾ ಪರಿಚಯಸ್ಥರು ವಾಟ್ಸಾಪ್ ಮೂಲಕ ಮದುವೆಯ ಆಮಂತ್ರಣಗಳನ್ನು ಕಳುಹಿಸುವುದು ನೀವು ಕಂಡಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಡಿಜಿಟಲ್ ವೆಡ್ಡಿಂಗ್ ಕಾರ್ಡ್‌ಗಳಿಗೆ ಸಾಕಷ್ಟು ಕ್ರೇಜ್ ಇದೆ. ಇದರಿಂದಾಗಿ ಜನರು ವಾಟ್ಸಾಪ್, ಇನ್ಸ್ಟಾ ಮತ್ತು ಫೇಸ್ಬುಕ್ನಂತಹ ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಮದುವೆ ಅಥವಾ ಇತರ ಕಾರ್ಯಕ್ರಮಗಳಿಗೆ ಪರಸ್ಪರ ಆಹ್ವಾನಿಸುತ್ತಾರೆ.
ಡಿಜಿಟಲ್ ವೆಡ್ಡಿಂಗ್ ಕಾರ್ಡ್‌ಗಳ (Wedding Card Scam)
ಇದೇ ಕಾರಣಕ್ಕೆ ವಾಟ್ಸಾಪ್ ಮೂಲಕ ಮದುವೆಗೆ ಆಹ್ವಾನಿಸುವುದು ಕೂಡ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಇದರ ಪ್ರಯೋಜನಗಳನ್ನು ವಂಚಕರು ಬಳಸುತ್ತಿದ್ದಾರೆ. ಕೆಲವು ಡಿಜಿಟಲ್ ಟ್ರೆಂಡ್ ವಿಚಾರಕ್ಕೆ ಬಂದರೆ ಸೈಬರ್ ವಂಚಕರು ಇದರ ಲಾಭ ಪಡೆಯಲು ಮುಂದಾಗುತ್ತಾರೆ. ವಾಟ್ಸ್‌ಆ್ಯಪ್‌ನಲ್ಲಿ ಇನ್ವಿಟೇಶನ್ ಕಾರ್ಡ್‌ಗಳ ಟ್ರೆಂಡ್ ನಡೆಯುತ್ತಿರುವಂತೆಯೇ ಮೋಸಗಾರರು ಡಿಜಿಟಲ್ ವೆಡ್ಡಿಂಗ್ ಕಾರ್ಡ್‌ಗಳ (Wedding Card Scam) ಮೂಲಕ ಅಮಾಯಕರನ್ನು ವಂಚಿಸುತ್ತಿದ್ದಾರೆ. ಈ ವಂಚಕರು ವಾಟ್ಸಾಪ್ ಬಳಕೆದಾರರಿಗೆ ಮದುವೆ ಕಾರ್ಡ್‌ಗಳನ್ನು ಸುಂದರವಾಗಿ ತಯಾರಿಸಿ QR ಮತ್ತು ಫೋಟೋ ಲಿಂಕ್ಗಳನ್ನು ಕಳುಹಿಸಿ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.