ಮುಳ್ಳೇರಿಯ: ‘ನಮ್ಮ ಕಾಸರಗೋಡು’ ಯೋಜನೆಯ ಭಾಗವಾಗಿ ಕಾಞಂಗಾಡು ನಗರಕ್ಕೆ ಹೊಸ ಮುಖವನ್ನು ನೀಡುವ ಮುಕ್ತ ಸಂಚಾರ-ಸಾಂಸ್ಕøತಿಕ ಕಾರಿಡಾರ್ ರಚಿಸುವ ಪ್ರಸ್ತಾವನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಅವರು ಇತ್ತೀಚೆಗೆ ವಿವಿಧೆಡೆ ಭೇಟಿ ನೀಡಿದರು. ನಮ್ಮ ಕಾಸರಗೋಡು ಕಾರ್ಯಕ್ರಮ ಪರಿಶೀಲನಾ ಸಭೆಯಲ್ಲಿ ಹೆರಿಟೇಜ್ ಕಾರಿಡಾರ್ ಪ್ರಸ್ತಾವನೆ ಬಂದಿದ್ದು, ಕಾಸರಗೋಡು ಜಿಲ್ಲೆಯ ಚಹರೆಯನ್ನು ಈ ಯೋಜನೆ ಬದಲಾಯಿಸಲಿದೆ.
ರಾಷ್ಟ್ರೀಯ ಚಳವಳಿ ಮತ್ತು ರೈತ ಚಳವಳಿಯ ಹೋರಾಟದ ಕೇಂದ್ರವಾಗಿದ್ದ ಈ ಸ್ಥಳಗಳ ಮೂಲಕ ಮಹಾಕವಿ ಪಿ.ಕುಂಜಿರಾಮನ್ ನಾಯರ್. ಎ.ಸಿ.ಕಣ್ಣನ್ ನಾಯರ್, ರಸಿಕ ಶಿರೋಮಣಿ ಕೋಮನ್ ನಾಯರ್, ವಿದ್ವಾನ್ ಪಿ.ಕೇಳು ನಾಯರ್, ವಿದ್ವಾನ್ ಕೆ.ಕೆ.ನಾಯರ್, ಕಾಸರಗೋಡಿನ ಸ್ವಾತಂತ್ರ್ಯ ಹೋರಾಟಗಾರ ಕೆ.ಮಾಧವನ್ ಈ ವ್ಯಾಪ್ತಿಯಲ್ಲಿ ಬದುಕಿ ಬಾಳಿದವರು. ಸುಸ್ಥಿರ ರೀತಿಯಲ್ಲಿ ಚಿತ್ರಕಲೆ, ಶಿಲ್ಪಕಲೆ ಮತ್ತು ಉದ್ಯಾನಗಳೊಂದಿಗೆ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದು ಜಿಲ್ಲೆಯ ಸಾಂಸ್ಕøತಿಕ ಅಸ್ಮಿತೆಗೆ ಮೌಲ್ಯವನ್ನು ಒದಗಿಸುತ್ತದೆ ಎಂದು ಜಿಲ್ಲೆಯ ಸಾಂಸ್ಕøಕ ಕಾರ್ಯಕರ್ತರು ನೀಡಿದ್ದ ಡಸೂಚನೆಯ ಮೇರೆಗೆ ಈ ಸಂದರ್ಶನ-ಅವಲೋಕನ ನಡೆಸಲಾಯಿತು.
ಖ್ಯಾತ ಶಿಲ್ಪಿ ಕನೈ ಕುಂಞÂ್ಞರಾಮನ್ ಕೂಡ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶವು ಸಾಂಪ್ರದಾಯಿಕ ವೃತ್ತಿಗಳಾದ ಕೈಮಗ್ಗ, ಲೋಹ ಮತ್ತು ದಾರು ಶಿಲ್ಪಕಲೆ, ತೈಯ್ಯಂ ಆರಾಧನಾ ಕಲೆ, ಮತ್ತು ಮಣ್ಣಿನ ಉತ್ಪನ್ನಗಳ ತಯಾರಿಕೆಗೆ ಸಾಂಪ್ರದಾಯಿಕ ಕೇಂದ್ರವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ತೈಲ ತೆಗೆಯುವ ಪ್ರದೇಶವೂ ಇದೇ ಆಗಿತ್ತು.
ಈ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಚಟುವಟಿಕೆ ಕೈಗೊಂಡಾಗ ಕಾಞಂಗಾಡ್ ನಗರದ ಟ್ರಾಫಿಕ್ ಜಾಮ್ ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಪ್ರವಾಸಿಗರಿಗೆ ಸಾಂಪ್ರದಾಯಿಕ ನಿರ್ಮಾಣ ವಿಧಾನಗಳನ್ನು ಪರಿಚಯಿಸಲು ಕಾರಿಡಾರ್ ಕಾರ್ಯನಿರ್ವಹಿಸಲಿದೆ.
ಜಿಲ್ಲಾಧಿಕಾರಿಯವರು ಮಡಿಯನ್ ಕೂಲೋಂ, ಅಡೋಟ್, ಕೈಮಗ್ಗ ಗ್ರಾಮ, ಮಹಾಕವಿ ವಿದ್ವಾನ್ ಪಿ ಕೇಳು ನಾಯರ್ ಅವರ ಸ್ಮಾರಕ, ಮನೆ, ವೆಳ್ಳಿಕ್ಕೋತ್ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಎಸಿ ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಯುಪಿ ಶಾಲೆಗೆ ಭೇಟಿ ನೀಡಿದರು. ಮುಕ್ತ ಸಂಚಾರ ಹಾಗೂ ಸಾಂಸ್ಕೃತಿಕ ಕಾರಿಡಾರ್ ಪರಿಕಲ್ಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ತುಂಬಾ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವಂತೆ ಯೋಜನೆಯ ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಸಾಂಸ್ಕೃತಿಕ ಕಾರ್ಯಕರ್ತ ಕೆ.ಪ್ರಸೇನನ್, ಶ್ಯಾಮಕುಮಾರ್ ಪುರವಂಕರ, ಕಮಾಂಡರ್ ಪಿ.ವಿ.ದಾಮೋದರನ್, ಬ್ರಿಗೇಡಿಯರ್ ಕೆ.ಎನ್.ಪ್ರಭಾಕರನ್ ನಾಯರ್, ಎಂ.ಕುಂಞಂಬು ಪೊದುವಾಳ್ ಮತ್ತಿತರರು ಯೋಜನೆಯ ರೂಪುರೇಷೆ ಮಂಡಿಸಿದರು.