ಬದಿಯಡ್ಕ: ಕುಂಬಳೆಯಲ್ಲಿ ಜರುಗಿದ ಉಪಜಿಲ್ಲಾಮಟ್ಟದ ಶಾಸ್ತೋತ್ಸವದಲ್ಲಿ ಒಟ್ಟು 424 ಅಂಕಗಳೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠವು ಗಮನಾರ್ಹ ಸಾಧನೆಗೈದಿದೆ. ವಿಜ್ಞಾನ, ಗಣಿತ, ಸಮಾಜವಿಜ್ಞಾನ, ಐಟಿ ಹಾಗೂ ವೃತ್ತಿ ಪರಿಚಯ ಹೀಗೆ ಐದು ವಿಭಾಗಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 90 ಮಕ್ಕಳು ಭಾಗವಹಿಸಿದ್ದರು. ಈ ಪೈಕಿ ಹೈಸ್ಕೂಲು ವಿಭಾಗದ 10 ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಜಿಲ್ಲಾ ಮಟ್ಟದ ಸ್ಪರ್ಧೆಗಳು ಕೇವಲ ಹೈಸ್ಕೂಲು ವಿಭಾಗಕ್ಕೆ ಸೀಮಿತಗೊಂಡಿದ್ದು, ವಿಜ್ಞಾನ ಮೇಳದಲ್ಲಿ ಕೆ.ಅಕ್ಷಯ ವೆಂಕಟೇಶ್, ಅಭಿನವ ಶ್ಯಾಮ ಕೆ., ಗಣಿತಮೇಳದಲ್ಲಿ ನಿಹಾರಿಕ, ಶ್ರೀಲಕ್ಷ್ಮೀ, ಗಣಿತ ಸ್ಟಿಲ್ ಮೋಡೆಲ್‍ನಲ್ಲಿ ವಿಷ್ಣುರಂಜನ್ ಸಿ., ವೃತ್ತಿಪರಿಚಯ ಮೇಳದಲ್ಲಿ ಸ್ತುತಿ ಕುಳೂರು, ಸಮನ್ವಿ ಕೆ.ಎಸ್., ಮಿಥುನ್ ಕೆ., ವೈಷ್ಣವಿ ಕೆ., ಸಿಂಧೂರರ ಆಯ್ಕೆಯಾಗಿದ್ದರು. ಈ ಎಲ್ಲಾ ವಿದ್ಯಾರ್ಥಿಗಳೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎ ಗ್ರೇಡ್ ಪಡೆದಿರುತ್ತಾರೆ. ಸ್ತುತಿ ಕುಳೂರು ವೆಜಿಟೇಬಲ್ ಪ್ರಿಂಟ್ ಸ್ಪರ್ಧೆಯಲ್ಲಿ ಎ ಗ್ರೇಡ್‍ನೊಂದಿಎ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷ ಸಂಘ, ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.