HEALTH TIPS

ಗುಜರಾತ್ | ಹನುಮ ದೇಗುಲದ ಬಳಿ ಸಾವಿರ ಕೊಠಡಿಗಳ ವಿಶ್ರಾಂತಿ ಗೃಹ; ಅಮಿತ್ ಶಾ ಚಾಲನೆ

 ಹಮದಾಬಾದ್‌: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಬೊತದ್ ಜಿಲ್ಲೆಯ ಸಲನ್‌ಪುರದಲ್ಲಿರುವ ಹನುಮ ದೇವಾಲಯದ ಆವರಣದಲ್ಲಿ 'ಯಾತ್ರಿಕ ಭವನ'ವನ್ನು ಗುರುವಾರ ಉದ್ಘಾಟಿಸಿದ್ದಾರೆ.

ಶ್ರೀ ಕಷ್ತಭಂಜನ್‌ ದೇವ್‌ ಹನುಮ ದೇವಾಲಯಕ್ಕೆ ಲಕ್ಷಾಂತರ ಭಕ್ತರು ವರ್ಷವಿಡೀ ಭೇಟಿ ನೀಡುತ್ತಾರೆ.

'ಗೋಪಾಲನಂದ ಸ್ವಾಮಿ ಯಾತ್ರಿಕ ಭವನ'ವು 1,100 ವಿಶ್ರಾಂತಿ ಕೊಠಡಿಗಳನ್ನು ಹೊಂದಿದ್ದು, ಇದನ್ನು ₹ 200 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ.

ಭವನದ ಉದ್ಘಾಟನೆ ಬಳಿಕ ಮಾತನಾಡಿರುವ ಅಮಿತ್‌ ಶಾ, 'ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಇಲ್ಲಿಯೇ ಉಳಿಯ ಬಯಸುವ ಭಕ್ತರಿಗಾಗಿ ಯಾತ್ರಿಕ ಭವನವನ್ನು ನಿರ್ಮಿಸಲು ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗಲೆಲ್ಲ, ಭಗವಂತ ಹನುಮಂತನನ್ನು ಪ್ರಾರ್ಥಿಸಲು ಇಲ್ಲಿಗೆ ಭೇಟಿ ನೀಡುತ್ತೇನೆ' ಎಂದಿದ್ದಾರೆ.

ಬಳಿಕ ಅವರು, ಇದೇ ಗ್ರಾಮದಲ್ಲಿರುವ ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries