ಬದಿಯಡ್ಕ: ನೆಕ್ರಾಜೆ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.28 ಮತ್ತು 29ರಂದು ನಡೆಯಲಿರುವ ಶಿವಶಕ್ತಿ ಮಹಾಯಾಗದ ಅಂಗವಾಗಿ ಮಾತೃಸಂಗಮ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಆಧ್ಯಾತ್ಮಿಕ ಹಾಗೂ ಭೌತಿಕ ಕಾರ್ಯಗಳಲ್ಲಿ ಕ್ರೀಯಾಶೀಲರಾದಾರೆ ಅದು ಮುಂದಿನ ತಲೆಮಾರಿಗೆ ಬಲುದೊಡ್ಡ ಕೊಡುಗೆಯಾಗಲಿದೆ. ಯಾವುದೇ ಅಭಿವೃದ್ಧಿ ಕಾರ್ಯದಲ್ಲೂ ಮಹಿಳಾ ಶಕ್ತಿಯ ಪಾತ್ರವು ಮಹತ್ತರವಾಗಿದೆ ಎಂದರು.
ವಾರ್ಡ್ ಸದಸ್ಯೆ ಚಿತ್ರಾ ಬಾಲಡ್ಕ, ಚೆಂಗಳ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಂತಕುಮಾರಿ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಮಾತೃಸಮಿತಿಯನ್ನು ರೂಪಿಸಲಾಯಿತು.